Sunday, December 22, 2024

ಅಮಿತಾಭ್ ಬಚ್ಚನ್​ಯಿಂದ ಕನ್ನಡದ ‘ಫಾರ್ REGN’ ಚಿತ್ರಕ್ಕೆ ಆಶೀರ್ವಾದ

ಬೆಂಗಳೂರು : ಇತ್ತೀಚೆಗಷ್ಟೆ ಫಾರ್ REGN’ ತಂಡ ಹಾಡಿನ ರೆಕಾರ್ಡಿಂಗ್ ಮುಗಿಸಿ, ಸಿನಿಮಾ ಪ್ರಿಯರಿಗೆ ಒಳ್ಳೆಯ ಸುದ್ದಿಯನ್ನು ನೀಡಿತ್ತು. ಇದರ ಬೆನ್ನಲ್ಲೆ ಈಗ ಮೊತ್ತೊಂದು ಹೊಸ ಸುದ್ದಿಯನ್ನ ನೀಡಿದೆ‌.

ಹೌದು‌,’ಫಾರ್ REGN‘ ಚಿತ್ರದ ನಿರ್ದೇಶಕ‌ ನವೀನ್ ದ್ವಾರಕನಾಥ್, ಪಾಪ್ಯುಲರ್ ಕ್ವಿಜ್ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿ (KBC)ಕಾರ್ಯಕ್ರಮದ ನಿರೂಪಕ,ಹಿಂದಿ ಚಿತ್ರರಂಗದ ಪ್ರಖ್ಯಾತ ನಟ, ನಿರ್ಮಾಪಕ, ಬಿಗ್ ಬಿ ಅಮಿತಾಭ್ ಬಚ್ಚನ್  ಅವರನ್ನು ಭೇಟಿ ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಫಾರ್ REGN’ ಚಿತ್ರದ ಕುರಿತು ಮಾತನಾಡಿ , ಆಶೀರ್ವಾದ ಪಡೆದುಕೊಂಡದ್ದು ನನ್ನ ಜೀವನದ ಅತ್ಯಂತ ಸಂತೋಷದ ದಿನ ಎಂದು ವ್ಯಕ್ತಪಡಿಸಿದರು.

‘ಫಾರ್ REGN’ ಚಿತ್ರದ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದ್ದು ಚಿತ್ರದ 3rd Nd schedule ಮುಗಿದಿದೆ.
ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಅಭಿನಯದ ‘ಫಾರ್ REGN’ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಖ್ಯಾತ ಖಳನಟ ರವಿಶಂಕರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ! ಅದೇ ರೀತಿ ಕನ್ನಡದ ಜನಪ್ರಿಯ ಪೋಷಕ ನಟ, ಶಂಕರ್ ನಾಗ್ ಅವರ ಆಪ್ತ ಸ್ನೇಹಿತ ರಮೇಶ್ ಭಟ್ ಚಿತ್ರದಲ್ಲಿ ನಟಿಸಿರುವುದು ಇನ್ನೂ ವಿಶೇಷ. ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ತುಳು ನಟ ಉಮೇಶ್ ಮಿಜಾರ್, ಮುಂಬೈ ನಟಿ ಶ್ರದ್ಧಾ ಸಾಲಿಯಾನ್, ತಬಲಾ ನಾಣಿ ಚಿತ್ರದಲ್ಲಿ ನಟಿಸಿರುವ ಪ್ರಮುಖರು.

RELATED ARTICLES

Related Articles

TRENDING ARTICLES