Monday, December 23, 2024

ವಿಶ್ವ ಅಥ್ಲೆಟಿಕ್ಸ್​​ನಿಂದ ‘ವರ್ಷದ ಮಹಿಳೆ’ ಪ್ರಶಸ್ತಿ

ಭಾರತದ ಮಾಜಿ ಕ್ರೀಡಾಪಟು​ ಅಂಜು ಬಾಬಿ ಜಾರ್ಜ್​ಗೆ ವಿಶ್ವ ಅಥ್ಲೆಟಿಕ್ಸ್ ವತಿಯಿಂದ ‘ವರ್ಷದ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತದಲ್ಲಿ ಕ್ರೀಡೆಯನ್ನು ಮುನ್ನಡೆಸುವ ಅವರ ಪ್ರಯತ್ನಕ್ಕೆ ಮತ್ತು ಹೆಚ್ಚಿನ ಮಹಿಳೆಯರನ್ನು ತಮ್ಮ ಹಾದಿಯಲ್ಲಿ ಸಾಗಲು ಪ್ರೇರೇಪಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಕೇರಳ ಮೂಲದ ಅಂಜು ಬಾಬಿ ಜಾರ್ಜ್ ಅವರು ಒಂದೇ ಕಿಡ್ನಿಯೊಂದಿಗೆ 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಲಾಂಗ್ ಜಂಪ್​ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದರು. ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಪದಕ ಪಡೆದ ಭಾರತದ ಮೊದಲ ಮತ್ತು ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅಂಜು ಪಾತ್ರರಾಗಿದ್ದಾರೆ.

ಎರಡು ಬಾರಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಅಂಜು, ಭಾರತದ ಮಹಿಳಾ ವಿಭಾಗದ ಲಾಂಗ್​ ಜಂಪ್​ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. 2005 ರಲ್ಲಿ IAAF ವಿಶ್ವ ಅಥ್ಲೆಟಿಕ್ಸ್ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇವರಿಗೆ 2002 ರಲ್ಲಿ ಅರ್ಜುನ ಪ್ರಶಸ್ತಿ, 2003 ರಲ್ಲಿ ಖೇಲ್ ರತ್ನ, ಮತ್ತು 2004 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನಿವೃತ್ತಿ ಬಳಿಕ ಕೂಡ ಕ್ರೀಡೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಅಂಜು, 2016ರಲ್ಲಿ ಯುವತಿಯರಿಗಾಗಿ ತರಬೇತಿ ಅಕಾಡೆಮಿಯನ್ನು ತೆರೆದರು. ಇಲ್ಲಿ ಕಲಿತವರು ಈಗಾಗಲೇ U20 ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಪದಕಗಳನ್ನ ಪಡೆದಿದ್ದಾರೆ.

ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಉಪಾಧ್ಯಕ್ಷೆಯಾಗಿರುವ ಅಂಜು ಬಾಬಿ, ಲಿಂಗ ಸಮಾನತೆಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಶಾಲಾ ಹೆಣ್ಣುಮಕ್ಕಳಿಗೂ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿಯೇ ವಿಶ್ವ ಅಥ್ಲೆಟಿಕ್ಸ್ ಇವರಿಗೆ ‘ವರ್ಷದ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಿದೆ.

RELATED ARTICLES

Related Articles

TRENDING ARTICLES