ಹುಬ್ಬಳ್ಳಿ : ಬೆಳೆ ವಿಮೆ ವಿಚಾರದಲ್ಲಿ ವಂಚನೆ ಮಾಡಲು ಬಿಡುವುದಿಲ್ಲ. ವಂಚನೆ ಮಾಡುವುವರಿಗೆ ಈಗಾಗಲೇ ತಾಕೀತು ಮಾಡಿದ್ದೇವೆ. ನಿಗದಿತ ಕಂಪನಿಗಳ ಮೇಲೆ ಆರೋಪ ಬಂದರೆ ಕ್ರಮ ಕೈಗೊಳ್ಳುತ್ತೇವೆ. ವಿಮಾ ಕಂಪನಿಗಳ ಜೊತೆ ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ.
ವಿಮಾ ಕಂಪನಿಗಳು ತಪ್ಪಿಸ್ಥರು ಆಗಿದ್ದರೆ ಕ್ರಮ ಕೈಗೊಳ್ಳೋಣ ಎಂದು ಕೃಷಿ ಸಚಿವ ಬಿಸಿ ಪಾಟೀಲ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು ರೈತರು ಸಾಲ ಮಾಡಿದಕ್ಕೆ ದಾಖಲೆಗಳು ಇದ್ದರೆ ಸಾಕು, ಬ್ಯಾಂಕ್ ನೋಟಿಸ್ ಕೊಡಲೇಬೇಕು ಅಂತಾ ಎನೂ ಇಲ್ಲ. ಅದರಲ್ಲೂ ಹಲವಾರು ಅಂಶಗಳು ಇವೆ.
ಹಾಗು ಈ ಸಮಯದಲ್ಲಿ ಬೆಳೆ ಹಾನಿಯ ಬಗ್ಗೆ ಮಾತನಾಡಿ ಪರಿಹಾರ ನೀಡಲು ಸಾಕಷ್ಟು ಕ್ರಮಗಳಿವೆ ಆದನ್ನು ಪಾಲಿಸಬೇಕು. ಕಮೀಟಿ ಪರಿಶೀಲನೆ ಮಡಬೇಕು, ಅದಕ್ಕೆ ಸೂಕ್ತವಾದ ದಾಖಲೆಗಳ ಜೊತೆಗೆ ಪಹಣಿ ಇರಬೇಕು ಎಂದರು. ಅಲ್ಲದೇ ಹೀಗಾಗಲೇ ಬೆಳೆ ಪರಿಹಾರ ನೀಡಲು ನಷ್ಟದ ಬಗ್ಗೆ ಸರ್ವೆ ಕಾರ್ಯ ಮಾಡದ್ದೇವೆ. 30 ರಿಂದ ಪರಿಹಾರ ನೀಡಲು ಸಿಎಂ ಸೂಚಿಸಿದ್ದಾರೆ.
ನವೆಂಬರ್ ತಿಂಗಳಿನಲ್ಲಿ 5 ಲಕ್ಷ ಹೆಕ್ಟೇರ್ಗೂ ಹೆಚ್ಚು ಬೆಳೆ ನಾಶವಾಗಿದೆ. ಜುಲೈನಿಂದ ನವೆಂಬರ್ವರೆಗೆ 11 ಲಕ್ಷ ಹೆಕ್ಟೇರ್ ಬೆಳೆ ನಾಶ ಆಗಿದೆ. ಅದೆಲ್ಲವನ್ನು ಸರ್ವೆ ಮಾಡಲಾಗಿದೆ. ಅಲ್ಲದೇ ಪರಿಹಾರ ನೀಡಲು ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.