Wednesday, January 8, 2025

ನಮ್ಮ ಗ್ರಹಚಾರ ಸರಿ ಇಲ್ಲ : ಕೆ.ಎಸ್ ಈಶ್ವರಪ್ಪ

ಕೊಪ್ಪಳ : ರಾಜ್ಯದಲ್ಲಿ ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ನಮ್ಮ ಗ್ರಹಚಾರ ಸರಿ ಇಲ್ಲ. ನಾಲ್ಕ ಬಾರಿ ನಮಗೆ ಪೂರ್ಣ ಬಹುಮತ ಸಿಗಲಿಲ್ಲ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

ಸೋಮವಾರ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಜನ ಆಡಳಿತ ಮಾಡಿ ಅಂತಾರೆ,ಆದರೆ ಒಂದು ಸಾರಿಯು ನಮ್ಮ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಪ್ರತಿಸಲವೂ ಒಂದ ಕಡಿಮೆ, ನಾಲ್ಕು ಕಡಿಮೆ ಸ್ಥಾನ ಬರುತ್ತಲೇ ಇದೆ. 4 ಬಾರಿನೂ ನಮ್ಮ ಗ್ರಹಚಾರ ಹಾಗೇ ಇತ್ತು.ಎಂದು ಹೇಳುವಾಗ ನಾಲ್ಕು ಬಾರಿ,ಅವನ್ಯಾವನೋ ಕರಕೊಂಡ ಬಾ,ಅವನಿಗೆ ದುಡ್ಡು ಕೊಡು ಇದೆ ಆಯ್ತು ಎಂದು ಈಶ್ವರಪ್ಪ ಭಾಷಣದಲ್ಲಿ ಪರೋಕ್ಷವಾಗಿ ಆಪರೇಶನ್ ಕಮಲಕ್ಕೆ ದುಡ್ಡು ಕೊಡಬೇಕು ಎಂದಿದ್ದಾರೆ.

RELATED ARTICLES

Related Articles

TRENDING ARTICLES