Monday, December 23, 2024

ಗರುಡ ಗಮನ ವೃಷಭ ವಾಹನ ಚಿತ್ರದ ವಿರುದ್ಧ ಮಾದಪ್ಪನ ಭಕ್ತರಿಂದ ಆಕ್ರೋಶ: ಕ್ಷಮೆ ಕೇಳ್ತಾರಾ ಡೈರೆಕ್ಟರ್..?

ಚಾಮರಾಜನಗರ: ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನದಿಂದ ಮುನ್ನುಗ್ಗುತ್ತಿರೋ ಗರುಡ ಗಮನ ವೃಷಭ ವಾಹನ ಚಿತ್ರದ ವಿರುದ್ದ ಗಡಿ ಜಿಲ್ಲೆಯಲ್ಲಿ ಆಕ್ರೋಶ  ವ್ಯಕ್ತವಾಗಿದೆ. ಚಿತ್ರದಲ್ಲಿ  ಸೋಜುಗಾದ ಸೂಜು ಮಲ್ಲಿಗೆ ಹಾಡು ಬಳಕೆಗೆ ಮಾದಪ್ಪನ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಮಲೈಮಹದೇಶ್ವರರ ಭಕ್ತಿಗೀತೆಯನ್ನ ಕೆಟ್ಟದಾಗಿ ಬಳಸಿಕೊಳ್ಳಲಾಗಿದೆ. ಕೊಲೆ ಮಾಡಿ ಕುಣಿಯುವ ದೃಶ್ಯಕ್ಕೆ ಹಾಡು ಬಳಸಿರೋದು ಸರಿಯಲ್ಲ. ಸಂಬಂಧವೇ ಇರದ ದೃಶ್ಯಕ್ಕೆ ಅಸಹಜವಾಗಿ ಮಹದೇಶ್ವರನ ಹಾಡು ಬಳಕೆ ಮಾಡಲಾಗಿದೆ ಎಂದು ಚಾಮರಾಜನಗರದ ಕಲಾವಿದರು ಹಾಗೂ ಮಾದಪ್ಪ ಭಕ್ತರಿಂದ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ದೈವಿಕ ಜಾನಪದ ಗೀತೆಯನ್ನ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ.? ಜಾನಪದ ಅಂದ ತಕ್ಷಣ ಏನಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ..? ಯಾವ ಹಾಡನ್ನು ಯಾವ ಸನ್ನಿವೇಶಕ್ಕೆ ಬಳಸಿಕೊಳ್ಳಬೇಕೆಂಬ ಪ್ರಜ್ಞೆ ಇರಲಿಲ್ಲವೇ.? ಕೂಡಲೇ ಚಿತ್ರದ ದೃಶ್ಯಾವಳಿಯನ್ನು ತೆಗೆದು ಹಾಕಬೇಕು ಅಷ್ಟೆ ಅಲ್ಲದೆ ನಿರ್ದೇಶಕರು ಮಾದಪ್ಪನ ಭಕ್ತರಲ್ಲಿ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES