ಬೆಂಗಳೂರು : ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡಿದ್ದಾರೆ ಎಂದು ಬಿಜೆಪಿಯ ಮಾಜಿ ಎಂಎಲ್ ಸಿ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
ಕಾಂಗ್ರೇಸ್ ನಾಯಕರು ಆರೋಪಿಸಿರುವ 40% ಕಮೀಷನ್ ಆರೋಪ ಸುಳ್ಳು. ಇದು ಕಾಂಗ್ರೇಸ್ ಕಡೆಯ ಗುತ್ತಿಗೆದಾರರ ಮೂಲಕ ಪತ್ರ ಬರೆಸಿ ಹಬ್ಬಿಸಿರುವ ವದಂತಿ. ಆಧಾರರಹಿತ ಆರೋಪ ಮಾಡುವುದು ಸಿದ್ಧರಾಮಯ್ಯ ಹಾಗೂ ಡಿಕೆಶಿಯವರ ಚಾಳಿ ಎಂದು ಹೇಳಿದ ಅಶ್ವಥ್ಥನಾರಾಯಣ ಬಿಟ್ ಕಾಯಿನ್ ಪ್ರಸ್ತಾಪದಲ್ಲಿ ಹ್ಯಾರಿಸ್ ಮಗ ಮೊಹಮದ್ ನಲಪಾಡ್ ಹೆಸರು ಪ್ರಸ್ತಾಪವಾಗಿದೆ. ಹೀಗಾಗಿ ಈಗ ಕಾಂಗ್ರೇಸ್ ಮೌನವಾಗಿದೆ. ಬಿಟ್ ಕಾಯಿನ್ ಬಗ್ಗೆ ಇಷ್ಟೆಲ್ಲ ಮಾತಾಡುವ ಕಾಂಗ್ರೇಸ್ ನಾಯಕರು ಒಂದೇ ಒಂದು ದಾಖಲೆ ಕೂಡ ಕೊಡಲಿಲ್ಲ.
ಇದೀಗ ಪರಿಷತ್ ಚುನಾವಣೆ ಬಂದಿರುವುದರಿಂದ ಕಾಂಗ್ರೇಸ್ ನಾಯಕರು ಮೈಮೇಲೆ ದೆವ್ವ ಬಂದ ಹಾಗೆ ಮಾತಾಡುತ್ತಿದ್ದಾರೆ, ಅಲ್ಲದೇ ಉಗ್ರಪ್ಪ, ಸಲೀಂ ಅಹಮದ್ ಹಾಗೂ ಡಿಕೆಶಿ ಅವರ ಕಮೀಷನ್ ಬಗ್ಗೆಯೂ ಕಿಡಿಕಾರಿದ್ದಾರೆ.