Wednesday, October 30, 2024

ನಾನು ಆಸೆ ಆಮಿಷಗಳಿಗೆ ಬಲಿಯಾಗಲಿಲ್ಲಾ : ಮಲ್ಲಿಕಾರ್ಜುನ ಎಸ್​ ಲೋಣಿ

ವಿಜಯಪುರ : ಸಿ‌ ಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್​ನ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿ ಎಂ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಸೇರಿದಂತೆ ಹಲವು ರಾಜಕೀಯ ಒತ್ತಡಗಳು ಬಂದಿದ್ದರೂ ಕೂಡಾ ನಾನು ಕಣದಿಂದ ಹಿಂದೆ ಸರಿಯಲಿಲ್ಲ.

ಕಾರಣ ಮತದಾರರು ನನ್ನನ್ನು ಆಶಿರ್ವದಿಸುತ್ತಾರೆ ಎಂಬ ಅಚಲ ವಿಶ್ವಾಸದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆಂದು ಎಂ ಎಲ್ ಸಿ ಪಕ್ಷೆತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ತಮ್ಮ ಗೆಲುವಿನ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಚುನಾವಣೆಯ ಮೊದಲು ವಿಜಯಪುರ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಜನರ ಮತದಾರರನ್ನು ಸಭೆ ಸೇರಿಸಿ ಮಾತನಾಡಿದೆ ಆಗ ಅವರೆಲ್ಲರೂ ಕಣದಿಂದ ಯಾವುದೇ ಕಾರಣಕ್ಕೆ ಹಿಂದೆ ಸರಿಯಬೇಡಿ ಎಂದು ಮತದಾರರು ಬೆಂಬಲ ಸೂಚಿಸಿದ್ದರು. ಎರಡು ರಾಷ್ಟ್ರೀಯ ಪಕ್ಷಗಳು ಅವಿರೋಧ ಆಯ್ಕೆ ಮಾಡುವ ಹುನ್ನಾರ ನಡೆಸಿ ಸ್ಥಳೀಯ ಸಂಸ್ಥೆಗಳ ಮತದಾರರ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆಸಿದ್ದರು. ಅಲ್ಲದೇ ಹಕ್ಕಿಗಾಗಿ ನಾನು ಕಣದಲ್ಲಿ ಇದ್ದಿನಿ ಎಂದಿದ್ದರು.

ಮತದಾರರಿಗೆ ಮಾತು ಕೊಟ್ಟಿದ್ದೇನೆ, ನನಗೆ ಸೊಲು ಗೆಲುವು ಮುಖ್ಯ ಅಲ್ಲ, ನಾನು ಸ್ಪರ್ಧೆಯಲ್ಲಿ ಇದ್ದಿನಿ, ಪಕ್ಷೇತರ ಅಭ್ಯರ್ಥಿಯಾಗಿ ಜಯ ಖಚಿತವಾಗಿದೆ ನಾನು ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಯಾಗಬೇಕಿತ್ತು, ಆದ್ರೆ ಟಿಕೆಟ್ ಸಿಗಲಿಲ್ಲ, ಕಳೆದ ಎಂ ಎಲ್ ಸಿ ಚುನಾವಣೆಯಲ್ಲಿ ಈ ಹಿಂದೆ ನಾಮ ಪತ್ರ ಹಿಂತೆಗೆದುಕೊಂಡಿದ್ದೆ ಈಗ ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಹಾಗು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ನನಗೆ ಪಂಚಾಯತ ಸದಸ್ಯರ ಕಷ್ಟ -ನೋವುಗಳ ಕುರಿತು ಅರಿವು ಇದೆ. ಅಖಂಡ ಪಂಚಾಯತ ಸದಸ್ಯರ ಒಕ್ಕೂಟ ರಚನೆ ಮಾಡಿ ಸ್ಥಳೀಯ ಸದಸ್ಯರಿಗೆ ಗೌರವ ಧನ ಹೆಚ್ಚಿಸಬೇಕು, ಮೂಲಭೂತ ಸೌಕರ್ಯಗಳ ಕೊರತೆ, ಸದಸ್ಯರಿಗೆ ಬಸ್ ಪಾಸ್ ನೀಡಬೇಕು, ಹೀಗೆ ಅನೇಕ ನೋವುಗಳು ಇವೆ. ಇವೆಲ್ಲದರ ಕುರಿತು ಧ್ವನಿ ಎತ್ತಲು ನಾನು ಸ್ಪರ್ಧೆ ಮಾಡಿರುವುದು ಎಂಢು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಹಿರಿಯ ರಾಜಕಾರಣಿ ಎಸ್.ಆರ್‌.ಪಾಟೀಲ ಅವರಿಗೆ ಟಿಕೇಟ್ ಕೊಡದೇ ಇರುವುದು ನನಗೆ ನೋವು ತಂದಿದೆ. ಇವತ್ತು ನನ್ನ ಜೊತೆ ಯಾವ ಮುಖಂಡರು ಇಲ್ಲಾ, ಆದರೆ ವಿಜಯಪುರ ಬಾಗಲಕೋಟೆ ಮತದಾರರು ಮಾತ್ರ ಇದ್ದಾರೆ, ರಾಷ್ಟ್ರೀಯ ಪಕ್ಷದ ಜೊತೆಗೆ ನನಗೂ ಬೆಂಬಲ ಕೊಡಿ ಎಂದು ಮನವಿ ಮಾಡಿದರು. ಜಯ ಹಾಗೂ ಅಪಜಯ ಆದರೂ ಮತದಾರರಿಗೆ ಕೀರ್ತಿ ಸಲ್ಲುತ್ತದೆ. ನನಗೆ ಎರಡೂ ಪಕ್ಷದವರೊಂದಿಗೆ ಪ್ರಬಲ ಪೈಪೋಟಿ ಇದೆ ಎಂದು ಮಾಧ್ಯಮದೊಂದಿಗೆ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES