ಚಿಕ್ಕಬಳ್ಳಾಪುರ : ಟೊಮೆಟೊ ಬೆಲೆ ಕೇಳಿದ್ರೆ ಬೆಚ್ಚಿಬೀಳೋ ಪರಿಸ್ಥಿತಿ ನಿರ್ಮಾಣವಾಗ್ಬಿಟ್ಟಿದೆ. ಒಂದು ಕೆ.ಜಿ ಆ್ಯಪಲ್ ಬೇಕಾದ್ರು ಕೊಳ್ಬೋದು ಆದ್ರೆ ಟ್ಯೊಮಾಟೋ ಕೊಂಡಿಕೊಳ್ಳುವುದೇ ಕಷ್ಟ ಕಷ್ಟ ಅಂತಿದ್ದಾರೆ ಗ್ರಾಹಕರು. ಯಾಕಂದ್ರೆ ಒಂದು ಕೆ.ಜಿ ಟೊಮಾಟೋ ಬೆಲೆ 20 ರಿಂದ 30 ರೂಪಾಯಿ ಇದ್ದದ್ದು 150 ರೂಪಾಯಾಗಿದೆ. ಟೊಮಾಟೋ ಬೆಲೆ ಏರಿಕೆಯ ಹಿನ್ನಲೆ ಬೆಳೆ ರಕ್ಷಣೆಗೆ ರೈತ ಹಾಕಿದ್ದ ವಿದ್ಯುತ್ ತಂತಿಯಿಂದಾಗಿ 2 ಜೀವವೇ ಬಲಿಯಾಗಿದೆ.
ಹೌದು ಚಿಕ್ಕಬಳ್ಳಾಪುರದಲ್ಲಿ ಟೊಮ್ಯಾಟೊ ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿಯಿಂದಾಗಿ ಯುವಕ ಸಾವನ್ನಪ್ಪಿದ್ದಾರೆ. ಜಿಲ್ಲೆಯ ನ ಚರಕಮಟ್ಟೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ವಸಂತರಾವ್ ಮೃತಪಟ್ಟ ದುರ್ದೈವಿ. ಕಳೆದು ಹೋಗಿದ್ದ ಕುರಿಯನ್ನ ವಸಂತ್ ರಾವ್ ಹುಡುಕಿಕೊಂಡು ಬರಲು ಹೋದಾಗ ಅಶ್ವತ್ಥ್ರಾವ್ ತೋಟದಲ್ಲಿದ್ದ ಹಾಕಿದ್ದ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ್ದಾರೆ.
ಟಮೋಟೋ ತೋಟಕ್ಕೆ ವಿದ್ಯುತ್ ಹಾಕಿದ್ದನ್ನ ವಸಂತರಾವ್ ಸಂಬಂಧಿಕರು. ಪ್ರಶ್ನಿಸಿದ್ದಾರೆ ಈ ವೇಳೆ ತೋಟದ ಮಾಲೀಕ ಅಶ್ವಥರಾವ್ ಅಸಭ್ಯವಾಗಿ ನಡೆದುಕೊಂಡು ಅವ್ಯಾಚ್ಯವಾಗಿ ನಿಂದಿಸಿದ್ದ ಆರೋಪ ಕೇಳಿಬಂದಿದ್ದು ನಿಂದನೆಗೆ ರೊಚ್ಚಿಗೆದ್ದು ತೋಟದ ಮಾಲೀಕ ಅಶ್ವಥರಾವ್ರನ್ನ ವಸಂತರಾವ್ ಸಂಬಂಧಿಕರು ಕೊಂದು ಹಾಕಿದ್ದಾರೆ.
ಟಮೋಟೋ ಬೆಲೆ ಗಗನಕ್ಕೇರಿದ್ದರಿಂದ ಗ್ರಾಮದ ಕೆಲವರಿಂದ ನಿತ್ಯ ಕಳ್ಳತನ ನಡೆಯುತ್ತಿತ್ತು ಹೀಗಾಗಿ ಕಳ್ಳತನ ಮಾಡದಂತೆ ಗ್ರಾಮಸ್ಥರಿಗೆ ಅಶ್ವಥರಾವ್ ಪದೇ ಪದೇ ಮನವಿ ಮಾಡಿದ್ದಾರೆ. ಆದ್ರೆ ಮನವಿಗೆ ಕೇರ್ ಮಾಡದೇ ಕಿಡಿಗೇಡಿಗಳು ಕಳ್ಳತನ ಮಾಡ್ತಿದ್ರು ಇದ್ರಿಂದ ಕೋಪಗೊಂಡ ಅಶ್ವಥರಾವ್ ಕಳ್ಳತನ ಮುಂದುವರೆಸಿದರೆ ಟಮೋಟೋ ತೋಟಕ್ಕೆ ವಿದ್ಯುತ್ ತಂತಿ ಹರಿಸುವ ಎಚ್ಚರಿಕೆ ನೀಡಿದ್ದಲ್ಲದೆ ವಿದ್ಯುತ್ ತಂತಿಯನ್ನೂ ಹಾಕಲಾಗಿತ್ತು. ಒಟ್ಟಿನಲ್ಲಿ ಕುರಿಯನ್ನ ಹುಡುಕಲು ಹೋಗಿ ಯುವಕ ಜೀವ ಕಳೆದುಕೊಂಡಿದ್ರೆ, ತಾನು ಹಾಕಿದ ವಿದ್ಯುತ್ ತಂತಿಯಿಂದಲೇ ತೋಟದ ಮಾಲೀಕ ಜೀವ ಕಳೆದುಕೊಂಡಿದ್ದಾನೆ. ಗೌರಿಬಿದನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.