Thursday, January 23, 2025

PESA ಕಾಯ್ದೆ1996 ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಪಂಚಾಯತ್‌ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996 ಅಥವಾ PESA ಕಾಯಿದೆಯು ಭಾರತದ ಪರಿಶಿಷ್ಟ/ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಾಂಪ್ರದಾಯಿಕ ಗ್ರಾಮ ಸಭೆಗಳ ಮೂಲಕ ಸ್ವ-ಆಡಳಿತವನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸರ್ಕಾರವು ಜಾರಿಗೊಳಿಸಿದ ಕಾನೂನಾಗಿದೆ. ಇದನ್ನು 1996ರಲ್ಲಿ ಸಂಸತ್ತು ಜಾರಿಗೊಳಿಸಿತು ಮತ್ತು ಡಿಸೆಂಬರ್ 24,1996 ರಂದು ಜಾರಿಗೆ ಬಂದಿತು.

PESA ಕಾಯ್ದೆಯನ್ನು ಭಾರತದಲ್ಲಿ ಬುಡಕಟ್ಟು ಶಾಸನದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. PESA ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು ಗುರುತಿಸುತ್ತದೆ ಮತ್ತು ಜನರ ಸ್ವ-ಆಡಳಿತವನ್ನು ಬೆಂಬಲಿಸುತ್ತದೆ.

ಹೌದು, ಗ್ರಾಮೀಣ ಭಾರತದಲ್ಲಿ ಸ್ಥಳೀಯ ಸ್ವ-ಆಡಳಿತವನ್ನು ಉತ್ತೇಜಿಸಲು, 1992ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿಯನ್ನು ತರಲಾಯಿತು. ಈ ತಿದ್ದುಪಡಿಯ ಮೂಲಕ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಯನ್ನು ಶಾಸನಬದ್ಧ ಗೊಳಿಸಲಾಯಿತು.

ಆದಾಗ್ಯೂ, ಅನುಚ್ಛೇದ 243(M) ಅಡಿಯಲ್ಲಿ ಪರಿಶಿಷ್ಟ ಮತ್ತು ಬುಡಕಟ್ಟು ಪ್ರದೇಶಗಳಿಗೆ ಅದರ ಅನ್ವಯವನ್ನು ನಿರ್ಬಂಧಿಸಲಾಗಿದೆ. 1995 ರಲ್ಲಿ ಭೂರಿಯಾ ಸಮಿತಿಯ ಶಿಫಾರಸುಗಳ ನಂತರ, ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಬುಡಕಟ್ಟು ಸ್ವ-ಆಡಳಿತವನ್ನು ಖಾತ್ರಿಪಡಿಸಲು ಬುಡಕಟ್ಟು ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ (PESA) ಕಾಯಿದೆ 1996 ಅಸ್ತಿತ್ವಕ್ಕೆ ಬಂದಿತು. PESA ಕಾಯಿದೆಯು ಗ್ರಾಮ ಸಭೆಗೆ ಸಂಪೂರ್ಣ ಅಧಿಕಾರವನ್ನು ನೀಡಿದೆ. ಆದರೆ, ರಾಜ್ಯ ಶಾಸಕಾಂಗವು ಪಂಚಾಯತ್ ಮತ್ತು ಗ್ರಾಮ ಸಭೆಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಲಹಾತ್ಮಕ ಪಾತ್ರವನ್ನು ಹೊಂದಿದೆ.
ಅಲ್ಲದೆ ಗ್ರಾಮ ಸಭೆಗೆ ನಿಯೋಜಿಸಲಾದ ಅಧಿಕಾರವನ್ನು ಉನ್ನತ ಮಟ್ಟದಿಂದ ಮೊಟಕುಗೊಳಿಸಲಾಗುವುದಿಲ್ಲ ಮತ್ತು ಅದು ತನ್ನ ಕಾರ್ಯವೈಖರಿಗೆ ಸಂಪೂರ್ಣ ಸ್ವಾತಂತ್ರವನ್ನು ಹೊಂದಿರುತ್ತದೆ.

RELATED ARTICLES

Related Articles

TRENDING ARTICLES