Sunday, December 22, 2024

ವಿಧಾನ ಪರಿಷತ್​​​ನಲ್ಲಿ ಇತಿಹಾಸ ಸೃಷ್ಠಿ ಮಾಡುತ್ತೇವೆ : ಬಿ.ಶ್ರೀರಾಮುಲು

ಕೊಪ್ಪಳ : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರ ಒಲವಿದೆ ಎಂದು ಪಂಪಾ ಸರೋವರದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ನಾಲ್ಕು ತಂಡ ಮಾಡಿಕೊಂಡು ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಒಟ್ಟು 24 ಕ್ಷೇತ್ರಗಳ ಪೈಕಿ 14ಕ್ಕೂ ಹೆಚ್ಚು ಕಡೆ ಬಿಜೆಪಿ ಅಭ್ಯರ್ಥಿಗಳು ವಿಧಾನ ಪರಿಷತ್​ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದೆ.ಹಾಗು ಈ ಚುನಾವಣೆಗೆ ಜನರು ನೀಡುತ್ತಿರುವ ಪ್ರತಿಕ್ರಿಯೆ ನೋಡಿ ಕಾಂಗ್ರೆಸ್ ನಾಯಕರು ಕೀಳು ಮಟ್ಟದಲ್ಲಿ ಮಾತಾಡ್ತಿದ್ದಾರೆ.ಅದುವಲ್ಲದೆ ಹತಾಶೆಯಿಂದ ಕಾಂಗ್ರೆಸ್ ನಾಯಕರುಗಳು ಪ್ರಧಾನಿ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡುತ್ತಿದ್ದಾರೆ,ಅದು ಅವರ ಮಾತು ಮತ್ತು ಸಂಸ್ಕಾರವನ್ನು ತೋರಿಸಿಕೊಡುತ್ತದೆ.

ಹಾಗು ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಸ್ಪರ್ಧಿ ಮತ್ತು ಮಹಾಂತೇಶ ಕೌಜಲಗಿಮಠ ಬಿಜೆಪಿ ಅಭ್ಯರ್ಥಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕುವಂತೆ ನಾವು ಮನವಿ ಮಾಡಿದ್ದೇವೆ. ಲಖನ್ ಜಾರಕಿಹೊಳಿ ಅವರ ಸ್ಪರ್ಧೆ ಅವರ ವೈಯಕ್ತಿಕ ಅದರ ವಿಚಾರವಾಗಿ ನಾನು ಮಾತನಾಡುವುದಿಲ್ಲ.ಅದರಿಂದ ನಮಗೆ ಲಾಭ, ನಷ್ಟ ಅಂತಾನೂ ನಾವು ಮಾತನಾಡುವುದಿಲ್ಲ, ನಮ್ಮ ಪಾರ್ಟಿ ಮೇಲೆ ನಮಗೆ ಸ್ಪಷ್ಟತೆ ಇದೆ ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES