Saturday, January 18, 2025

ಅಲ್ಪಸಂಖ್ಯಾತರನ್ನ ಬಲಿ ತೆಗೆದುಕೊಳ್ಳುತ್ತಿದ್ದಾರೆ ಕುಮಾರಸ್ವಾಮಿ : ಜಮೀರ್ ಹೇಳಿಕೆ

ಮಂಡ್ಯ : ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ಮಾತಿನ ಚಕಮಕಿ ಮುಂದುವರೆಯುತ್ತಲೇ ಇದೆ.ಅದ್ರಲ್ಲು ಜಮೀರ್ ಖಾನ್, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೇಸೋದ್ರಲ್ಲಿ ಮುಂಚೂಣಿಯಲ್ಲಿದ್ದಾರೆ.ಇದೀಗ ಮತ್ತೆ ಹೆಚ್​ಡಿಕೆ ವಿರುದ್ದ ಮಂಡ್ಯದಲ್ಲಿ ಶಾಸಕ ಜಮೀರ್ ಅಹ್ಮದ್‌ ಖಾನ್ ಗುಡುಗಿದ್ದಾರೆ.

ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗಲೇ ಅವರ ಪುತ್ರ ನಿಖಿಲ್ ಚುನಾವಣೆಯಲ್ಲಿ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ ಜಮಾನದಲ್ಲಿ ಮಂಡ್ಯ ಜೆಡಿಎಸ್ ಭದ್ರಕೋಟೆ ಆಗಿತ್ತು.ಆಗ ಹೆಚ್​ಡಿಕೆ ಬಗ್ಗೆ ರಾಜ್ಯದ ಜನರು ನಿರೀಕ್ಷೆ ಇಟ್ಟುಕೊಂಡಿದ್ರು , ಹಾಗು ಆ ಸಮಯದಲ್ಲಿ ಪಾಫುಲರ್ ಕೂಡ ಆಗಿದ್ದರು.2006ರಲ್ಲಿ ಕುಮಾರಸ್ವಾಮಿ ಒಳ್ಳೆ ಸರ್ಕಾರ ಕೊಟ್ಟಿದ್ದರು,ಅದರಿಂದ ರಾಜ್ಯದ ಜನತೆಗೂ ಒಳ್ಳೆಯದಾಗಿತ್ತು ಅದನ್ನು ನಾನು ಇಲ್ಲ ಅಂತ ಹೇಳಲ್ಲ ಸಾಧ್ಯವಿಲ್ಲ.

ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದ್ರೆ ರಾಜ್ಯಕ್ಕೆ ಒಳ್ಳೆದಾಗುತ್ತೆ ಎಂದು ಎಲ್ಲ ವರ್ಗದ ಜನ ನಿರೀಕ್ಷೆಯನ್ನು ಇಟ್ಟುಕೊಂಡಿದ್ರು.ಆದರೆ ಈಗ ಅವರನ್ನು ಜನರು ತಿರಸ್ಕರಿಸಿದ್ದಾರೆ.
ಕುಮಾರಸ್ವಾಮಿ ಅಲ್ಪಸಂಖ್ಯಾತರಾದ ಮುಸಲ್ಮಾನರನ್ನ ಪ್ರತಿಸಲ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಬಲಿಕೊಡದಕ್ಕೆ ಸಿಗೋದೆ ಅಲ್ಪಸಂಖ್ಯಾತರು. ಎಂದು ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ಶಾಸಕ ಜಮೀರ್ ವಾಗ್ದಾಳಿ ನಡೆಸಿದ್ದಾರೆ.ಜೆಡಿಎಸ್‌ನವರು ಬಿಜೆಪಿ ಜೊತೆ ಒಳ ಒಪ್ಪಂದವನ್ನು

ಮಾಡಿಕೊಂಡಿದ್ದಾರೆ.ಮಡಿಕೇರಿಯಲ್ಲಿ ಮುಸ್ಲಿಂ ಅಭ್ಯರ್ಥಿಗೆ MLC ಟಿಕೆಟ್ ಕೊಟ್ಟಿದ್ದಾರೆ.ಅಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲ್ಲೋಕೆ ಸಾಧ್ಯನಾ.? ರೇವಣ್ಣ ಮಗನಿಗೆ ಟಿಕೆಟ್ ಕೊಡುವ ಬದಲು‌ ಕಾರ್ಯಕರ್ತರಿಗೂ, ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ಹಂಚಿಕೆಯನ್ನು ನೀಡಬಹುದಿತ್ತು . ಮುಸಲ್ಮಾನರ ಮೇಲೆ ಅಷ್ಟೊಂದು ಪ್ರೀತಿ ವಿಶ್ವಾಸ ಇದ್ದಿದ್ದರೆ ಹಾಸನದಲ್ಲಿ ಟಿಕೆಟ್ ಕೊಡಬೇಕಿತ್ತು.ಹಾಸನ ಬಿಟ್ರೆ ಮೈಸೂರು, ಮಂಡ್ಯ ಅಥವಾ ತುಮಕೂರಿನಲ್ಲಿ ಟಿಕೆಟ್‌ ಕೊಡ್ಬೇಕಿತ್ತು.

ಅಲ್ಪಸಂಖ್ಯಾತರಿಗೆ ಸೋಲೋ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಟಿಕೆಟ್‌ ಕೊಡ್ತಾರೆ.ಗೆಲ್ಲುವ ಕಡೆ ಟಿಕೆಟ್‌ ಕೊಟ್ರೆ ಹೆಚ್‌ಡಿಕೆಗೂ ಪ್ರೀತಿ ಇದೆ ಅಂತ ಒಪ್ಕೋತ್ತೀವಿ.ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದಾಗ ಅನಿತಕ್ಕನಿಗೆ ಟಿಕೆಟ್‌ ಕೊಟ್ರು.ಅನಿತಕ್ಕನಿಗೆ ಟಿಕೆಟ್‌ ಕೊಡುವ ಬದಲು ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೊಡಬಹುದಿತ್ತು ಅಲ್ವಾ..?ಜೆಡಿಎಸ್‌ನಿಂದ ನೂರಕ್ಕೆ ನೂರರಷ್ಟು ಅಲ್ಪಸಂಖ್ಯಾತರಿಗೆ ಅನ್ಯಾಯವಾಗ್ತಿದೆ ಅಂತ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ವಾಗ್ದಾಳಿ

RELATED ARTICLES

Related Articles

TRENDING ARTICLES