Tuesday, December 24, 2024

ಗುಮಾಸ್ತನಾಗಿದ್ದ ಮಾಯಣ್ಣ ನುಂಗಣ್ಣ ಆದ ನೋಡಣ್ಣ

ಬೆಂಗಳೂರು : ಎಸಿಬಿ ಅಧಿಕಾರಿಗಳು ಭ್ರಷ್ಟರ ಬೇಟೆಯಾಡಿದ್ದಾರೆ.. 15 ಭ್ರಷ್ಟ ಕುಳಗಳ ಚಳಿ ಬಿಡಿಸಿದ್ದಾರೆ..ಅದ್ರಲ್ಲಿ ಎಸಿಬಿಗೆ ಶಾಕ್ ಆಗಿದ್ದು ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದಲ್ಲಿ ಪ್ರಥಮದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಯಣ್ಣನ ಅಕ್ರಮ ಸಂಪಾದನೆ. ಮಾಯಣ್ಣನ ಭ್ರಷ್ಟ ಸಾಮ್ರಾಜ್ಯ ನೋಡಿ ಎಸಿಬಿಗೆ ಶಾಕ್‌ ಆಗಿದೆ. ಸರ್ಕಾರದ 135 ಕೋಟಿ ನುಂಗಿ ಹಾಕಿದ್ನಾ BBMP ನೌಕರ ಅನ್ನೋ ಪ್ರಶ್ನೆ ಎದುರಾಗಿದೆ.

ಮಾಯಣ್ಣನ ಆದಾಯಕ್ಕಿಂತ 5 ಕೋಟಿ ಹೆಚ್ಚುವರಿ ಆಸ್ತಿ ಪತ್ತೆಯಾಗಿದೆ. ಮನೆ ಲಾಕರ್​ನಲ್ಲಿ 580 ಗ್ರಾಂ ಚಿನ್ನ,ಬ್ಯಾಂಕ್ ಲಾಕರ್​ನಲ್ಲಿ 600 ಗ್ರಾಂ ಚಿನ್ನ, 10 ಲಕ್ಷ ಡೆಪಾಸಿಟ್ , 7 ಸೈಟ್​​​, 4 ಮನೆ ಮಾಯಣ್ಣ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಪತ್ತೆಯಾಗಿದ್ದು.ಪತ್ನಿ ಹೆಸರಿನಲ್ಲಿ ಬೆನ್ಜ್‌, ಇನೋವಾ ಐಷಾರಾಮಿ ಕಾರು ಇರೋದು ಸಾಬೀತಾಗಿದೆ. ಕೇವಲ 11 ವರ್ಷದಲ್ಲೇ ಇಷ್ಟೆಲ್ಲಾ ಆಸ್ತಿಗಳಿಸಿದ್ದು ಬಹಳ ಕುತೂಹಲ ಹುಟ್ಟಿಸುತ್ತಿದೆ.BBMP ನೌಕರಿಗಿಂತ ಅಕ್ರಮಗಳಲ್ಲೇ ಹೆಚ್ಚು ಹೆಸರು ಮಾಡಿದ್ದ ಈ ಮಾಯಣ್ಣ. BBMP ಇತಿಹಾಸದಲ್ಲೇ 11 ವರ್ಷ ಒಂದೇ ಪೋಸ್ಟ್‌ನಲ್ಲಿದ್ದ ಏಕೈಕ ವ್ಯಕ್ತಿ ಅಂದ್ರೆ ಮಾಯಣ್ಣ. 2012 /13 ರಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ ಹಣ ಬಿಡುಗೆ ಆರೋಪ ಕೇಳಿ ಬಂದಿದೆ.135 ಕೋಟಿ ಹಣವನ್ನೂ ಕಾನೂನು ಬಾಹಿರವಾಗಿ ಬಿಡುಗಡೆ ಮಾಡಿದ್ದ ಆರೋಪದ ಜೊತೆಗೆ 26 ಕೋಟಿ ರೂಪಾಯಿ‌ ಹೆಚ್ಚಿನ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿದ್ದ.

ಮಾಯಣ್ಣ ತಂದೆ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿದ್ದರು. ಅಕಾಲಿಕ ನಿಧನ ಹೊಂದಿದ ಕಾರಣ, ಅನುಕಂಪದ ಆಧಾರದ ಮೇಲೆ ಮಾಯಣ್ಣ ಬಿಬಿಎಂಪಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. 2002 ಜನವರಿ 22 ರಲ್ಲಿ ಬಿಬಿಎಂಪಿಗೆ ನೇಮಕವಾಗಿದ್ದ. ತಂದೆ ನಿಧನದ ನಂತರ ಅನುಕಂಪದ ಆಧಾರದ ಮೇಲೆ ದ್ವಿತೀಯ ದರ್ಜೆ ಗುಮಾಸ್ತನಾಗಿ ನೇಮಕಗೊಂಡ. ಮೊದಲು ಮಾಗಡಿ ರೋಡ್​ನ ಹೈಸ್ಕೂಲ್​ನಲ್ಲಿ ಗುಮಾಸ್ತನಾಗಿದ್ದ ನಂತರ 2004 ರಲ್ಲಿ ಶಾಂತಿನಗರ ಎಇಇ ಕಚೇರಿಗೆ ಪೋಸ್ಟಿಂಗ್ ಆಯ್ತು. ಅಲ್ಲಿಂದ ಮುಂಬಡ್ತಿ ಪಡೆದು ಕೇಂದ್ರ ಕಚೇರಿಗೆ ಬಂದ. ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗಕ್ಕೆ ಮುಂಬಡ್ತಿ ಆಯ್ತು. 2009 ರಂದು ಪಾಲಿಕೆಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿ ಎಫ್ಡಿಸಿಯಾಗಿ ನೇಮಕಗೊಂಡು ಕೋಟಿಗಟ್ಟಲೇ ಅವ್ಯವಹಾರ ನಡೆಸಿದ್ದಾನೆ.

RELATED ARTICLES

Related Articles

TRENDING ARTICLES