Sunday, December 22, 2024

ರೈತರಿಗೆ ಪರಿಹಾರ ಕೊಡೋದು ಸರ್ಕಾರದ ಕರ್ತವ್ಯ : ಆರ್ ಅಶೋಕ್

ಹಾಸನ : ಹಾಸನ ಜಿಲ್ಲೆಯ ರಾಗಿಮರೂರಿನಲ್ಲಿ ಒಟ್ಟು 47 ಸಾವಿರ ಹೆಕ್ಟೇರ್ ಕೃಷಿ ಹಾಗು 300 ತೋಟಗಾರಿಕೆ ಬೆಳೆ ಹಾನಿ ಆಗಿದೆ ಎಂದು ಕಂದಾಯ ಸಚಿವರ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧೀಕ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಕೂಡಲೆ ರೈತರಿಗೆ ಬೆಳೆ ಪರಿಹಾರ ಸಿಗಬೇಕಿದೆ ನೇರವಾಗಿ ರೈತರ ಖಾತೆಗೆ ಪರಿಹಾರ ಸಂದಾಯ ಆಗೋ ರೀತಿ ಕ್ರಮ ವಹಿಸಲಾಗುತ್ತದೆ. ಅಲ್ಲದೇ ಹವಾಮಾನ ವರದಿ ಪ್ರಕಾರ ಚೆನ್ನೈ ಸೈಕ್ಲೋನ್ ಶುರುವಾದ್ರೆ ಮತ್ತೊಂದು ಸುತ್ತು ಮಳೆ ಬರಲಿದೆ ಇದರಿಂದ ಮಳೆ ಇನ್ನೂ ಮುಂದುವರೆಯುವ ಸಾಧ್ಯತೆ ಎಂದು ವರದಿ ನೀಡಿದೆ.

ಮಳೆ ಬಂದು ರಾಗಿ ತೆನೆಯು ಉದುರಿ ಮೊಳಕೆ ಬರುತ್ತಿದೆ , ಹುಲ್ಲುಕೂಡ ಕೊಳೆಯುತ್ತಿದೆ ಹಾಗಾಗಿ ರೈತರಿಗೆ ಕೂಡಲೆ ಪರಿಹಾರ ಕೊಡೋದು ಸರ್ಕಾರದ ಕರ್ತವ್ಯವಾಗಿದೆ. ಅದುವಲ್ಲದೆ ನಾನು ಸಾಕಷ್ಟು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಎನ್.ಡಿ.ಆರ್ ಎಫ್ ಪರಿಹಾರ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ನಿಗದಿ ಆಗಿದ್ದು ಅದು ಇನ್ನೂ ಪರಿಷ್ಕರಣೆ ಆಗಿರಲಿಲ್ಲ. ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪರಿಹಾರ ಹೆಚ್ಚಿಸಬೇಕೆಂದು ಮನವಿ ಮಾಡಿ ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದೇವೆ. ಹಾಗು ಕೇಂದ್ರ ಹಣಕಾಸು ಸಚಿವರು ಕೂಡಲೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ. ಹೀಗಾಗಲೇ 300ಕೋಟಿ ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ.

ಕಾಫಿ ಬೆಳೆ ಗೂ ಕೂಡ ರಾಜ್ಯ ಸರ್ಕಾರ ಪರಿಹಾರ ಕೊಡುತ್ತದೆ. ಶೇಕಡಾ 33 ಕ್ಕಿಂತ ಹೆಚ್ಚು ಹಾನಿಯಾಗಿರೋ ಪ್ರದೇಶದ ಕಾಫಿ ಬೆಳೆಗೆ ಪರಿಹಾರ ನೀಡುತ್ತೇವೆ. ಹಾಸನ ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್ ಮಾನದಂಡದ ಪ್ರಕಾರ 33.ಕೋಟಿ ನಷ್ಟ ಆಗಿದೆ. ಆದರೆ ಕನಿಷ್ಠ ನೂರು ಕೋಟಿಗೂ ಹೆಚ್ಚು ಲಾಸ್ ಆಗಿದೆ.

ಕೇವಲ ರಾಗಿ ಅಷ್ಟೆ ಅಲ್ಲ ಎಲ್ಲಾ ರೀತಿಯ ಬೆಳೆ ಹಾನಿಗೆ ಪರಿಹಾರ ಸಿಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್​ರವರು ಹೇಳಿದ್ದಾರೆ.ಮತ್ತು ಬೆಳೆ ಹಾನಿ ಪ್ರದೇಶಗಳಿಗೆ ಕಂದಾಯ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.

RELATED ARTICLES

Related Articles

TRENDING ARTICLES