Wednesday, October 30, 2024

MLCಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ ಆಸ್ತಿ ವಿವರ

ಶಿವಮೊಗ್ಗ : ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನ ಕುಮಾರ್ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್ ಪ್ರಕಾರ, ಅವರ ಒಟ್ಟು ಆಸ್ತಿ 24 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ತಮ್ಮ ಹೆಸರಿನಲ್ಲಿ, 18.15 ಕೋಟಿ ಸ್ಥಿರಾಸ್ತಿ, 1.21 ಕೋಟಿ ರೂ. ಚರಾಸ್ತಿ, ಪತ್ನಿ ಪ್ರಭಾವತಿ ಹೆಸರಿನಲ್ಲಿ, 3.40 ಕೋಟಿ ರೂ. ಸ್ಥಿರಾಸ್ತಿ, 16.48 ಕೋಟಿ ರೂ. ಚರಾಸ್ತಿ ಸೇರಿದಂತೆ, ಒಟ್ಟು 24 ಕೋಟಿ ರೂ. ಮೌಲ್ಯದ ಆಸ್ತಿ ನಮೂದಿಸಿದ್ದಾರೆ. ಅಲ್ಲದೇ, ವಿವಿಧ ಬ್ಯಾಂಕ್, ಸಹಕಾರ ಸಂಘಗಳಲ್ಲಿ 8.60 ಲಕ್ಷ ಕೈ ಸಾಲ ಮತ್ತು 6 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ.

ತಮ್ಮ ಹೆಸರಿನಲ್ಲಿ 6,26,551 ಡಿಸಿಸಿ ಬ್ಯಾಂಕ್ ನಲ್ಲಿ ಎಫ್.ಡಿ. ಮಾಡಿರುವ ಪ್ರಸನ್ನ ಕುಮಾರ್, ತಮ್ಮ ಪತ್ನಿ ಪ್ರಭಾವತಿ ಹೆಸರಿನಲ್ಲಿ ಎಸ್.ಬಿ.ಐ. ಬ್ಯಾಂಕ್ ನಲ್ಲಿ 12,796 ರೂ. ಸ್ಥಿರ ಠೇವಣಿ ಇಟ್ಟಿದ್ದಾರೆ. ಅಲ್ಲದೆ, ಬ್ಯಾಂಕ್ ಆಫ್ ಇಂಡಿಯಾದ ತಮ್ಮ ಉಳಿತಾಯ ಖಾತೆಯಲ್ಲಿ 6,912 ರೂ. ಇದ್ದು, ತಮ್ಮ ಪತ್ನಿ ಪ್ರಭಾವತಿ ಉಳಿತಾಯ ಖಾತೆಯಲ್ಲಿ 14,436 ರೂ. ಇಡಲಾಗಿದೆ. ಅದರಂತೆ ತಮ್ಮ ಪುತ್ರನ ಫೆಡರಲ್ ಬ್ಯಾಂಕ್ ನಲ್ಲಿ 8,82,520 ರೂ. ಇಡಲಾಗಿದೆ. ಜೊತೆಗೆ ಶಿವಮೊಗ್ಗದ ಕೆನರಾ ಬ್ಯಾಂಕ್ ನಲ್ಲಿ 39,760 ರೂ., ಬೆಂಗಳೂರಿನ ಎಲ್.ಹೆಚ್. ನಲ್ಲಿರುವ ಅಪೆಕ್ಸ್ ಬ್ಯಾಂಕ್ ನಲ್ಲಿ 3,16,055, ಶಿವಮೊಗ್ಗದ ಫೆಡರಲ್ ಬ್ಯಾಂಕ್ ನಲ್ಲಿ 7,552, ಅದೇ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ 666 ರೂ. ಹಣ ಇಟ್ಟಿದ್ದಾರೆ.

ಎಲ್.ಐ.ಸಿ. ಯಲ್ಲಿ 4,15,989 ರೂ. ಪಾಲಿಸಿ ಇದ್ದು, ಮತ್ತೊಂದು 31,87,500 ಪಾಲಿಸಿ ಹೊಂದಿದ್ದಾರೆ. ಅವರ ಪತ್ನಿ ಪ್ರಭಾವತಿ ಹೆಸರಿನಲ್ಲಿ 1,75,900 ರೂ. ಎಲ್.ಐ.ಸಿ. ಬಾಂಡ್ ಹೊಂದಿದ್ದು, 3,87,725, ಮತ್ತೊಂದು 59,466, 29,715 ರೂ. ಪಾಲಿಸಿ ಹೊಂದಿದ್ದಾರೆ. ತಮ್ಮ ಸಹ್ಯಾದ್ರಿ ಪೆಟ್ರೋಲ್ ಬಂಕ್ ಗೆ 20,76,079 ರೂ. ಬಂಡವಾಳ ಹೂಡಿಕೆ ಮಾಡಿದ್ದು, ತಮ್ಮ ಪತ್ನಿ ಹೆಸರಿನಲ್ಲಿ 6,65,386 ರೂ. ಹೂಡಿಕೆ ಮಾಡಿಸಿದ್ದು, ತಮ್ಮ ಪುತ್ರನ ಹೆಸರಿನಲ್ಲಿ 2,58,011 ರೂ. ಹೂಡಿಕೆ ಮಾಡಿಸಿದ್ದಾರೆ.

ಅಲ್ಲದೇ, ವಿವಿಧ ಉದ್ಯಮ, ಬಾಂಡ್ ಗಳಲ್ಲಿ 30 ಲಕ್ಷ ರೂ. ಹೂಡಿಕೆ ಮಾಡಿರುವ ಆರ್. ಪ್ರಸನ್ನ ಕುಮಾರ್, ಕುಟುಂಬದ ಬಳಿ 940 ಗ್ರಾಂ. ಚಿನ್ನಾಭರಣಗಳಿವೆ. ಜೊತೆಗೆ ಫಾರ್ಚ್ಯುನರ್ ಕಾರು ಸೇರಿದಂತೆ, 40 ಲಕ್ಷ ರೂ. ಮೌಲ್ಯದ 2 ಕಾರುಗಳ ಒಡೆತನ ಹೊಂದಿದ್ದಾರೆ. ಈ ಹಿಂದಿನ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ, 14.81 ಲಕ್ಷ ರೂ. ಇದ್ದ ವಾರ್ಷಿಕ ಆದಾಯ, ಈ ಬಾರಿ 3.17 ಲಕ್ಷ ರೂ. ಏರಿಕೆಯಾಗಿದೆ.

RELATED ARTICLES

Related Articles

TRENDING ARTICLES