ವಿಜಯಪುರ : ಬಾಗಲಕೋಟೆ–ವಿಜಯಪುರ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಹನುಮಂತಪ್ಪ ಪೂಜಾರ (ಪಿ.ಎಚ್.ಪೂಜಾರ) ಅವರು ಕೋಟಿ ಒಡೆಯನಾಗಿದ್ದಾರೆ.
ಚುನಾವಣಾಧಿಕಾರಿ ಅವರಿಗೆ ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ನಗದು ₹95,100, 250 ಗ್ರಾಂ ಬಂಗಾರ, 500 ಗ್ರಾಂ ಬೆಳ್ಳಿ, ಒಂದು ಇನೋವಾ ಕಾರು, ವಿವಿಧ ಬ್ಯಾಂಕ್ ಅಕೌಂಟ್ ಮತ್ತು ಹೂಡಿಕೆ ಸೇರಿದಂತೆ ₹1,79,68,161 ಚರಾಸ್ತಿ ಹಾಗೂ ₹2,32,01,021 ಮೊತ್ತದ ಸ್ಥಿರಾಸ್ಥಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಅವರ ಪತ್ನಿ ಪ್ರಮೀಣಾ ದೇವಿ ಬಳಿ ₹1,50,500 ನಗದು, 1790 ಗ್ರಾಂ ಬಂಗಾರದ ಆಭರಣ, 2278 ಗ್ರಾಂ ಬೆಳ್ಳಿ ಸೇರಿದಂತೆ ₹1,43,33,139 ಕೋಟಿ ಮೊತ್ತದ ಚರಾಸ್ತಿ ಹಾಗೂ 13 ಎಕರೆ ಜಮೀನು ಸೇರಿದಂತೆ ಒಟ್ಟು ₹2,01,74,000 ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ.
ಅವಿಭಕ್ತ ಕುಟುಂಬದ (ಎಚ್ಯುಎಫ್) ಹೆಸರಲ್ಲಿ ₹1,80,350 ನಗದು, 300 ಗ್ರಾಂ ಬಂಗಾರ, 475 ಗ್ರಾಂ ಬೆಳ್ಳಿ ಸೇರಿದಂತೆ ₹48,75,403 ಚರಾಸ್ತಿ ಹಾಗೂ ₹2,89,43,550 ಮೊತ್ತದ ಸ್ಥಿರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.