Sunday, May 12, 2024

ಮಹಾ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್?

ಮಹಾರಾಷ್ಟ್ರ : ಪೆಟ್ರೋಲ್ ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ವಿಪರೀತವಾಗಿ ಏರಿಕೆಯಾಗಿರೋ ಈ ಹೊತ್ತಿನಲ್ಲಿ ಮಹಾರಾಷ್ಟ್ರ ಸರ್ಕಾರ ಮದ್ಯಪ್ರಿಯರಿಗೆ ಹಾಟ್ ನ್ಯೂಸ್ ನೀಡಿದೆ. ಹೌದು ಮಹಾರಾಷ್ಟ್ರದಲ್ಲಿ ಆಮದು ಮಾಡಿಕೊಳ್ಳೋ ಸ್ಕಾಚ್ ಬೆಲೆಯನ್ನ ಇತರ ರಾಜ್ಯಗಳಿಗೆ ಸರಿಸಮಾನಾಗಿಸೋದಕ್ಕೆ ತೀರ್ಮಾನ ತೆಗೆದುಕೊಂಡಿರುವ ಮಹಾ ಸರ್ಕಾರ ವಿಸ್ಕಿ ಮೇಲಿನ ಅಬಕಾರಿ ಸುಂಕವನ್ನ ಶೇಕಡಾ 50 ರಷ್ಟು ಕಡಿತಗೊಳಿಸಿದಕ್ಕೆ ಮುಂದಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಸದ್ಯಕ್ಕೆ ಲಭ್ಯವಿರೋ ಮಾಹಿತಿ ಪ್ರಕಾರ ಆಮದು ಮಾಡಿಕೊಂಡ ಸ್ಕಾಚ್ ವಿಸ್ಕಿಯ ಮೇಲಿನ ಅಬಕಾರಿ ಸುಂಕವನ್ನು ಉತ್ಪಾದನಾ ವೆಚ್ಚವನ್ನ 300 ಪ್ರತಿಶತದಿಂದ 150 ಪ್ರತಿಶತಕ್ಕೆ ಇಳಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದಲ್ಲಿ ಸ್ಕಾಚ್ ವಿಸ್ಕಿಯ ಬೆಲೆ ಕಡಿಮೆಯಾಗಲಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.
ಸದ್ಯಕ್ಕೆ ಮಹಾರಾಷ್ಟ್ರದ ಅಬಕಾರಿ ಇಲಾಖೆಯಿಂದ ಕೇಳಿ ಬರ್ತಾ ಇರೋ ಮಾಹಿತಿಯ ಪ್ರಕಾರ 1000 ಮಿಲಿ ಸ್ಕಾಚ್ ವಿಸ್ಕಿಯನ್ನ ಆಮದು ಮಾಡಿದ್ರೆ ಅದರ ಬೆಲೆ ಕನಿಷ್ಠ 5000 ರೂಪಾಯಿಗಳಿಂದ ಗರಿಷ್ಠ 14,000 ರೂಪಾಯಿ ಇರುತ್ತೆ. ಇದೀಗ ಇದೇ ಬೆಲೆ ಕನಿಷ್ಠ 35 ರಿಂದ 40% ಕಡಿಮೆಯಾಗಲಿದೆ ಅನ್ನೋ ಮಾತಿಗಳು ಕೇಳಿ ಬಂದಿದೆ.. ಇನ್ನು ಆಮದು ಮಾಡಿಕೊಳ್ಳುವ ಸ್ಕಾಚ್ ಮಾರಾಟದಿಂದ ಮಹಾರಾಷ್ಟ್ರ ಸರ್ಕಾರಕ್ಕೆ ವಾರ್ಷಿಕ ₹ 100 ಕೋಟಿಗೂ ಅಧಿಕ ಆದಾಯ ಬರುತಂತೆ. ಇದೀಗ ಹೊಸ ದರ ಜಾರಿಯಾದ್ರೆ ಸುಮಾರು ಒಂದು ಲಕ್ಷ ಬಾಟಲಿಗಳಿಂದ 2.7 ಲಕ್ಷ ಬಾಟಲಿಗಳು ಮಾರಾಟವಾಗುವ ನಿರೀಕ್ಷೆ ಇರುವುದರಿಂದ ಆದಾಯ ₹ 250 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮಹಾರಾಷ್ಟ್ರದ ಅಬಕಾರಿ ಇಲಾಕೆಯ ಅಧಿಕಾರಿಗಳು ನೀಡಿರೋ ಮಾಹಿತಿಯ ಪ್ರಕಾರ 2016-17, 2017-18 ಹಾಗೂ 2018-19 ವಾರ್ಷಿಕದಲ್ಲಿ ಸರ್ಕಾರ 200 ಕೋಟಿ ರೂಪಾಯಿ ಅಬಕಾರಿ ಸುಂಕ ಸಂಗ್ರಹಿಸಿದೆ. ಆದ್ರೆ 2019-20 ಹಾಗೂ 2020-21 ವಾರ್ಷಿಕದಲ್ಲಿ ಅವದಿಯಲ್ಲಿ ಈ ಅದಾಯ 100 ಕೋಟಿ ರೂಪಾಯಿಗೆ ಕುಸಿದಿದೆ ಇದಕ್ಕೆ ಪ್ರಮುಖ ಕಾರಣ ಬೆಲೆ ಹೆಚ್ಚಳ ಹಾಗು ಕಡಿಮೆ ಬೆಲೆಯ ಕಡೆ ಮದ್ಯ ಪ್ರಿಯರು ವಾಲ್ತಾ ಇರೋದು ಪ್ರಮುಖ ಕಾರಣ ಅನ್ನೋದು ಅಧಿಕಾರಿಗಳ ವಾದ.

ಹೀಗಾಗಿ ಈಗ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ತೆಗೆದುಕೊಳ್ತಾ ಇದೆ ಅನ್ನೋ ಸುದ್ದಿ ಹೊರ ಬರ್ತಾ ಇದ್ದ ಹಾಗೆ ಮಹಾರಷ್ಟ್ರದಲ್ಲಿ ಎಣ್ಣೆ ವ್ಯಾಪಾರ ಜೋರಾಗಿದೆ ಅನ್ನೋ ಮಾತುಗಳು ಕೂಡ ಕೇಳಿಬರ್ತಾ ಇದೆ, ಸದ್ಯದ ಮಟ್ಟಿಗೆ ಈಗ ಮಹಾರಾಷ್ಟ್ರದಲ್ಲಿ ಮದ್ಯದ ಬೆಲೆ ಕಡಿಮೆಯಾಗಿರೋದ್ರಿಂದ ಬೇರೆ ರಾಜ್ಯಗಳಲ್ಲೂ ಮದ್ಯದ ಬೆಲೆ ಇಳಿಕೆಯಾಗೋ ನಿರೀಕ್ಷೆ ಇದೆ ಅಂತ ಹೇಳಲಾಗ್ತಾ ಇದೆ.

RELATED ARTICLES

Related Articles

TRENDING ARTICLES