Monday, December 23, 2024

PMGSYಯ ಬಗ್ಗೆ ನೀವೆಷ್ಟು ತಿಳಿದಿದ್ದೀರಿ?

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಯನ್ನು 25ನೇ ಡಿಸೆಂಬರ್ 2000 ರಂದು ಪ್ರಾರಂಭಿಸಲಾಯಿತು. ರಸ್ತೆ ಸಂಪರ್ಕವಿಲ್ಲದ ವಸತಿ ಪ್ರದೇಶಗಳಿಗೆ ಸರ್ವ-ಋತು ರಸ್ತೆ ಸಂಪರ್ಕವನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶ. ಜನಗಣತಿ-2001 ರ ಪ್ರಕಾರ, ಬಯಲು ಪ್ರದೇಶಗಳಲ್ಲಿ 500 ಕ್ಕಿಂತ ಹೆಚ್ಚು ಮತ್ತು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಲ್ಲಿ 250 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಸ್ತೆ ವಂಚಿತ ವಸತಿ ಪ್ರದೇಶಗಳು ಈ ಕಾರ್ಯಕ್ರಮದ ಅಡಿಯಲ್ಲಿ ಅರ್ಹತೆಯನ್ನ ಪಡೆದುಕೊಂಡಿದೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಲ್ಲಿ ಯೋಜನೆಯಡಿ ಮಂಜೂರಾದ ಯೋಜನೆಗಳಿಗೆ ಸಂಬಂಧಿಸಿದಂತೆ, ಯೋಜನಾ ವೆಚ್ಚದ 90% ಕೇಂದ್ರ ಸರ್ಕಾರವು ಭರಿಸಿದರೆ, ಇತರ ರಾಜ್ಯಗಳಿಗೆ ಕೇಂದ್ರ ಸರ್ಕಾರವು 60% ವೆಚ್ಚವನ್ನು ಭರಿಸುತ್ತದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ: ಹಂತ-I

1. PMGSY-I ಅನ್ನು ಡಿಸೆಂಬರ್, 2000 ರಲ್ಲಿ 100% ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪ್ರಾರಂಭಿಸಲಾಯಿತು.

2. ಯೋಜನೆಯಡಿಯಲ್ಲಿ, 1,35,436 ವಸತಿಗಳಿಗೆ ರಸ್ತೆ ಸಂಪರ್ಕವನ್ನು ಒದಗಿಸಲು ಮತ್ತು ಕೃಷಿಯಿಂದ ಮಾರುಕಟ್ಟೆಗೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು 3.68 ಲಕ್ಷ ಕಿ.ಮೀ ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆಗಳನ್ನು ನವೀಕರಿಸಲು ಗುರಿಯನ್ನು ನಿಗದಿಪಡಿಸಲಾಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ- ಹಂತ II:

1. ನಂತರ, ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ – ಹಂತ II (PMGSY-II) ಅನ್ನು 2013 ರಲ್ಲಿ ಭಾರತ ಸರ್ಕಾರವು ಅದರ ಒಟ್ಟಾರೆ ದಕ್ಷತೆಯನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆ ಜಾಲದ 50,000 ಕಿಮೀಗಳನ್ನು ನವೀಕರಿಸಲು ಪ್ರಾರಂಭಿಸಿತು.

2. ಆದಾಗ್ಯೂ, PMGSY-I ಅಡಿಯಲ್ಲಿಯೂ ಕೆಲಸ ಮುಂದುವರೆದಿದೆ ಮತ್ತು ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ಯ ಎರಡನೇ ಹಂತದ ಅಡಿಯಲ್ಲಿ, ಗ್ರಾಮೀಣ ಸಂಪರ್ಕಕ್ಕಾಗಿ ಈಗಾಗಲೇ ನಿರ್ಮಿಸಲಾದ ರಸ್ತೆಗಳನ್ನು ಗ್ರಾಮೀಣ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮೇಲ್ದರ್ಜೆಗೆ ಏರಿಸುವ ಗುರಿಯನ್ನು ಹೊಂದಿದೆ.

ಈ ಯೋಜನೆಗೆ ಹಲವು ಸವಾಲುಗಳಿವೆ..

1. ಮೀಸಲು ನಿಧಿಯ ಕೊರತೆ

2. ಪಂಚಾಯತ್ ರಾಜ್ ಸಂಸ್ಥೆಗಳ ಸೀಮಿತ ಪಾಲುದಾರಿಕೆ.

3. ಅಸಮರ್ಪಕ ಅನುಷ್ಠಾನ ಮತ್ತು ಗುತ್ತಿಗೆ ಸಾಮರ್ಥ್ಯ

4. ವಿಶೇಷವಾಗಿ ಗುಡ್ಡಗಾಡು ರಾಜ್ಯಗಳಲ್ಲಿ ಕಡಿಮೆ ‘ಕೆಲಸದ ಅವಧಿ’ ಮತ್ತು ಕಷ್ಟಕರವಾದ ಭೂಪ್ರದೇಶ.

5. ನಿರ್ಮಾಣ ಸಾಮಗ್ರಿಗಳ ಕೊರತೆ

6. ಎಡಪಂಥೀಯ ಉಗ್ರಗಾಮಿ ಪ್ರದೇಶಗಳಲ್ಲಿ ಭದ್ರತಾ ಕಾಳಜಿ.

RELATED ARTICLES

Related Articles

TRENDING ARTICLES