ಕರ್ನಾಟಕ : ಕಳೆದ ಒಂದು ವಾರದಿಂದ ಮಳೆಯ ಆರ್ಭಟಕ್ಕೆ ಇಡೀ ಕರುನಾಡೇ ತತ್ತರಸಿಹೋಗಿದೆ. ಮಳೆಯಿಂದ ಸಾವಿರಾರು ಎಕರೆ ಬೆಳೆ ಕೊಚ್ಚಿಹೋಗಿದೆ. ಅಲ್ಲದೆ ರಾಜ್ಯಾದ್ಯಂತ ಕೋಟ್ಯಾಂತರ ರೂಪಾಯಿ ಬೆಳೆ ಹಾನಿಗೀಡಾಗಿ ರೈತರು ಕಣ್ಣೀರು ಹಾಕುತ್ತಿದ್ದು, ನೂರಾರು ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ರಸ್ತೆಗಳೆಲ್ಲಾ ಕೆರೆಗಳಂತಾಗಿ ವಾಹನ ಸವಾರರು ಪರದಾಡ್ತಿದ್ದಾರೆ. ಆದ್ರೆ ಇದ್ಯಾವುದರ ಪರಿವೇ ಇಲ್ಲದೆ ಸಿಎಂ ಬಸವರಾಜ್ ಬೊಮ್ಮಾಯಿ ಸಿನಿಮಾ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ.
ಮಳೆಯಿಂದ ಇಷ್ಟೆಲ್ಲಾ ಅವಾಂತರವಾಗ್ತಿದ್ರೂ ಸಿಎಂ ಏನ್ ಮಾಡ್ತಿದ್ದಾರೆ? ರಾಜ್ಯದಲ್ಲಿ ಜನರು ವರುಣಾರ್ಭಟಕ್ಕೆ ತತ್ತರಿಸಿ ಹೋಗ್ತಿದ್ರು ತಲೆಕೆಡಿಸಿಕೊಳ್ತಿಲ್ಲ ಸಿಎಂ. ಕಾರಣ ಸಿನಿಮಾ ಪೋಸ್ಟರ್ ಲಾಂಚ್ಗೆ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದಾರೆ ಹಾಗು ವಾರದಲ್ಲಿ ಎರಡೆರಡು ಸಿನಿಮಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದಾರೆ. ನಿನ್ನೆ ‘ಮದಗಜ’ ಟ್ರೈಲರ್ ಲಾಂಚ್ , ಮೊನ್ನೆ ‘ಇನ್’ ಚಿತ್ರದ ಪೋಸ್ಟರ್ ಲಾಂಚ್ನಲ್ಲಿದ್ದಾರೆ.
ಜನರ ಸಮಸ್ಯೆಗಳಿಗಿಂತಲೂ ಸಿನಿಮಾ ಕಾರ್ಯಕ್ರಮಗಳೇ ಮುಖ್ಯವಾಯ್ತಾ ಸಿಎಂಗೆ, ಇನ್ನಾದ್ರೂ, ಬೊಮ್ಮಾಯಿ ಸಾಹೇಬ್ರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಡ್ತಾರಾ..? ಅಂತ ಸದ್ಯ ಸಾರ್ವಜನಿಕ ವಲಯದಲ್ಲಿ ಕಾಮನ್ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಿಡಿಕಾರಿದ್ದಾರೆ. ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡ್ತಿಲ್ಲ, ಬೊಮ್ಮಾಯಿ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಇಂತಹ ಬೇಜವಾಬ್ದಾರಿ ಸಿಎಂ ಅವರನ್ನು ನಾವು ನೋಡಿರಲಿಲ್ಲ, ಅಂತ ಮಾಧ್ಯಮದೊಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಟಿ.ಬಿ.ಜಯಚಂದ್ರ ಕಿಡಿಕಾರಿದ್ದಾರೆ.