ನಾವ್ ಮೊದ್ಲಿಂದಾ ಹೇಳ್ತಿರೋ ಹಾಗೆ, ನಾನ್ವೆಜ್ ಇಲ್ಲದ ಕರಾವಳಿ ಊಟ ಅಪೂರ್ಣ. ಅದ್ರಲ್ಲೂ ಕರಾವಳಿಯಲ್ಲಿ ಅಡುಗೆ ಮಾಡೋ ವಿಧಾನ ಮತ್ತು ಬಳಸೋ ಪದಾರ್ಥ ಎಲ್ಲವೂ ಒಂಥರಾ ವಿಭಿನ್ನ. ಕರಾವಳಿಯ ಅಡುಗೆ ರುಚಿಗೆ ಮೊದಲ ಕಾರಣ ಬಳಸುವ ಅವರದೇ ಮನೆಯಲ್ಲಿ ಬೆಳೆದ ತೆಂಗಿನ ಪರಿಶುಧ್ಧ ಎಣ್ಣೆ. ಆಮೇಲೆ ಅಲ್ಲಿನ ಕೈರುಚಿ. ಮಣ್ಣಿನ ಪಾತ್ರೆಯ ಅಡುಗೆಯೇ ಹಾಗೆ ನೋಡಿ.
ಕರಾವಳಿಯ ಬ್ಯಾಚುಲರ್ ಹುಡುಗ್ರು ಊರ್ ಬಿಟ್ಟಮೇಲೆ ಬಹಳ ಕಷ್ಟಪಡೋದು ಊಟದ ವಿಚಾರದಲ್ಲಿ. ಅವರಿಗೋಸ್ಕರ ಸುಲಭವಾಗಿ ಊರಿನ ಕಡೆ ಮೀನು ಫ್ರೈ ಮಾಡೋದು ಹೇಗೆ ಅನ್ನೋದು ನೋಡೋಣ.
ಹುಣಸೇ ಹಣ್ಣು ಮೊದಲ ಆದ್ಯತೆ. ಇಲ್ಲಾಂದ್ರು, ಒಂದು ಮೊಟ್ಟೆ, ಖಾರ ಪುಡಿ, ದನಿಯಾ ಪುಡಿ, ಸ್ವಲ್ಪ ಉಪ್ಪು, ಮತ್ತೆ ಸ್ವಲ್ಪ ಸೋಯಾ ಸಾಸ್. ಹುಣಸೆ ಹಣ್ಣು ಇದ್ರೆ ಅದನ್ನು ಹಿಂಡಿದ ನೀರು, ಇದನ್ನ ಒಂದು ಸಣ್ಣ ಹದದಲ್ಲಿ ಮಿಕ್ಸ್ ಮಾಡಿ, ಕುಯ್ದಿರುವ ಮೀನಿನ ಜೊತೆ ಸರಿಯಾಗಿ ಬೆರೆಸಿ, ಅರ್ಧ ಗಂಟೆ ಬಿಡಿ. ಆಮೇಲೆ ರವಾದ ಜೊತೆ ಒಂದು ಸುತ್ತು ಹೊರಳಿಸಿ, ಕಾದಿರುವ ತವಾಗೆ ಬಿಟ್ಟು 10 ನಿಮಿಷ ಬೇಯಿಸಿ ತಿಂದ್ರೆ ಕರಾವಳಿ ಒಂದ್ಸಲ ರಪ್ ಅಂತ ಪಾಸ್ ಆಗುತ್ತೆ.