ಬೆಂಗಳೂರು : ದೇಶದಲ್ಲಿ ಇಂದೂ ಕೂಡ ಇಂಧನ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ. ಇದರಿಂದ ರಾಜ್ಯದ ಜನರು ತುಸು ನೆಮ್ಮದಿಯಾಗಿದ್ದಾರೆ .
ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾದ ಬಳಿಕ ಯಾವುದೇ ನಗರಗಳಲ್ಲಿ ಇಂಧನ ದರದಲ್ಲಿ ಏರಿಳಿತಗಳಾಗಿಲ್ಲ. ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ , ಸೆಸ್ ವ್ಯಾಟ್ ಕಡಿಮೆ ಮಾಡಿದ್ದರಿಂದ , ಪ್ರಮುಖ ಎಲ್ಲಾ ಪಟ್ಟಣಗಳಲ್ಲಿ ಯಥಾಸ್ಥಿತಿಯಲ್ಲಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿ ಇಂದಿಗೆ 13 ದಿನ ಕಳೆದಿವೆ. 13 ದಿನದ ನಂತರದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ದೇಶದ ಪ್ರಮುಖ ಮಹಾ ನಗರಗಳಲ್ಲಿಯೂ ಕೂಡ ಇಂಧನ ದರ ಸ್ಥಿರತೆಯಲ್ಲಿದೆ.