Wednesday, January 22, 2025

ಯುವರತ್ನನಿಗೆ ” ಕರ್ನಾಟಕ ರತ್ನ ” : ಸಿಎಂ ಬಸವರಾಜ್‌ ಬೊಮ್ಮಾಯಿ ಘೋಷಣೆ

ಬೆಂಗಳೂರು : ರಾಜರತ್ನ ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ನಿಸ್ವಾರ್ಥ ಭಾವನೆಯಿಂದ ಮಾಡಿದರು . ಅವರು ಮಾಡಿದ ಉತ್ತಮ ಕೆಲಸವೂ ಅಪ್ಪುವಿನ  ಕುಟುಂಬಕ್ಕೂ ಗೊತ್ತಿರಲಿಲ್ಲ .ಅಪ್ಪು ಒಳ್ಳೆಯ ಕಾರ್ಯ ಇಡೀ ಕರುನಾಡಿಗೆ ಕೊಟ್ಟ ಬಹುದೊಡ್ಡ  ಉಡುಗೊರೆ.

ಬಾಲ್ಯದಲ್ಲೇ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಪುನೀತ್ ರಾಜ್​ಕುಮಾರ್​. ಇಂದು ಅವರು ನಮ್ಮ ಜೊತೆ ಇಲ್ಲ ಆದರೆ ಅವರ ಉತ್ತಮ ಕಾರ್ಯಗಳು ನಮ್ಮ ಜೊತೆ ಇದೆ . ಅಲ್ಲದೇ  ಸಣ್ಣ ವಯಸ್ಸಿನಲ್ಲೇ ತಂದೆ ಜೊತೆ ಅದ್ಭುತ ನಟನೆ ಮಾಡಿ ಜನರ ಮನಸ್ಸನ್ನು ಗೆದ್ದ ವೀರಕನ್ನಡಿಗ .

ಶಾಸಕ ಮುನಿರತ್ನ ಮಾಡಿಸಿದ್ದ ವಿಟಿ  ನಮ್ಮೆಲ್ಲರಿಗೂ ಕಣ್ಣೀರು ತರಿಸಿತು ಎಂದು ಭಾವುಕರಾಗಿ ತುಂಬು ಹೃದಯದಿಂದ ಅಪ್ಪುಗೆ  ” ಕರ್ನಾಟಕ ರತ್ನ “ಮರಣೋತ್ತರ ಪ್ರಶಸ್ತಿಯನ್ನು  ಸಿ.ಎಂ ಬಸವರಾಜ್ ಬೊಮ್ಮಾಯಿಯವರು ಘೋಷಣೆ ಮಾಡಿದರು. ಸೂರ್ಯ ಚಂದ್ರ ಇರುವವರೆಗೂ ಕರ್ನಾಟಕ ರತ್ನ’ವಾಗಿ ಇರ್ತಾರೆ,ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

RELATED ARTICLES

Related Articles

TRENDING ARTICLES