Monday, December 23, 2024

ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್​

ಬೆಂಗಳೂರು : ಬಿಟ್​ಕಾಯಿನ್​ ವಿಚಾರದಲ್ಲಿ  ಕಾಂಗ್ರೆಸ್​-ಬಿಜೆಪಿ ನಡುವೆ ಜಟಾಪಟಿ ಶುರುವಾಗಿದೆ. ಬಿಟ್​ಕಾಯಿನ್​ ಪ್ರಕರಣದಲ್ಲಿ ಭಾಗಿಯಾದವರ ಹೆಸರು ಬಿಜೆಪಿಯವರಿಗೆ ಗೊತ್ತಾಗಬೇಕು. ಸರ್ಕಾರ ಅವರದ್ದೇ ಇರೋದು, ಆಗಲ್ಲ ಅಂದ್ರೆ ಅಧಿಕಾರ ಬಿಟ್ಟು ಹೋಗಲಿ ಎಂದು ವಿಕಪ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಸವಾಲ್​ ಹಾಕಿದ್ದಾರೆ.

2018ರಲ್ಲಿ ನಾನು ಸಿಎಂ ಆಗಿದ್ದೆ, ಆಗ ಯಾರು ದೂರು ಕೊಟ್ಟಿಲ್ಲ. ಅಂದು ಬಿಜೆಪಿ ನಾಯಕರು ಸುಮ್ಮನೆ ಇದ್ದಿದ್ದು ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮೊದಲು ರಣ್​ದೀಪ್​ ಸುರ್ಜೇವಾಲಾ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ. ನಲಪಾಡ್​ ಪ್ರಕರಣ ಸಂಬಂಧ ಕ್ರಿಮಿನಲ್​ ಕೇಸ್​ ದಾಖಲಾಗಿದೆ. ಬಸವರಾಜ್​ ಬೊಮ್ಮಾಯಿ ಗೃಹಸಚಿವರಾಗಿದ್ದಾಗ ನಡೆದಿರುವ ಘಟನೆ. ಆ ಕೇಸ್​ನಲ್ಲಿ ಯಾರಿದ್ದಾರೆ ಅನ್ನೋದನ್ನ ಬೊಮ್ಮಾಯಿ ಹೇಳಲಿ ಎಂದು ಬೆಂಗಳೂರನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES