Thursday, December 19, 2024

ಸೆಲ್ಫಿ ಕ್ರೇಜ್‌ಗೆ ಬಲಿಯಾದ ಇಬ್ಬರು ಯುವಕರು

ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾ.ತಾವರೆಕೆರೆ ಫ್ಲೈ ಓವರ್ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ನಿನ್ನೆ ತಡರಾತ್ರಿ ಸುಮಾರು 1 ಗಂಟೆಯಲ್ಲಿ ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿಗಳಾದ ಐವರು ಯುವಕರು ಸೆಲ್ಫಿ ಕ್ರೇಜ್​ಯಿಂದಾಗಿ ತಾವರೆಕೆರೆ ಫ್ಲೈ ಓವರ್ ಮೇಲೆ ನಿಂತು ಪೋಟೋ ತೆಗೆದುಕೊಳ್ಳಿತ್ತಿರುವಾಗ,ಎದುರುಗಡೆಯಿಂದ ಬಂದ ಲಾರಿಯು ಐವರು ಯುವಕರಿಗೆ ಡಿಕ್ಕಿ ಹೊಡೆದಿದ್ದು , ಸ್ಥಳದಲ್ಲೇ ಇಬ್ಬರು ಯುವಕರು ಸಾವು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

ದಿನೇಶ್(25), ವಿನಯ್ (25) ಮೃತ ಯುವಕರು, ಅಂಕಿತ್ ಸ್ಥಿತಿ ಚಿಂತಾಜನಕ ಹಾಗೂ ಜನಾರ್ಧನ್ ಮತ್ತು ಜಾಸ್ಮಿನ್ ಎಂಬ ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು , ಗಾಯಗೊಂಡ ಯುವಕರನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ .

RELATED ARTICLES

Related Articles

TRENDING ARTICLES