Monday, December 23, 2024

ಹಳಿ ತಪ್ಪಿದ ರೈಲು: ಪ್ರಯಾಣಿಕರು ಸೇಫ್

ಗುಡ್ಡ ಕುಸಿದತ ಪರಿಣಾಮ ಕಣ್ಣೂರು ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಐದು ಬೋಗಿಗಳು ಶುಕ್ರವಾರ ಮುಂಜಾನೆ ಹಳಿ ತಪ್ಪಿವೆ. ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ತೊಪ್ಪೂರು ಸಿವಾಡಿ ಮಧ್ಯೆ ಹಳಿಗೆ ಬಂಡೆಗಳು ಉರುಳಿಬಿದ್ದ ಪರಿಣಾಮ ರೈಲು ಹಳಿ ತಪ್ಪಿದೆ. ಮುಂಜಾನೆ 3.50ರ ಸುಮಾರಿಗೆ ಸಂಚರಿಸುತ್ತಿರುವ ರೈಲಿನ ಮೇಲೆ ಬಂಡೆಗಳು ಉರುಳಿದ್ದು, ರೈಲು ಹಳಿ ತಪ್ಪಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 2,348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ಹೇಳಿಕೆ ಉಲ್ಲೇಖಿಸಿ .

ರೈಲು ಹಳಿ ತಪ್ಪಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಸುಮಾರು 2,348 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾರೂ ಸಹ ಗಾಯಗೊಂಡಿಲ್ಲ ಎಂದು ನೈಋತ್ಯ ರೈಲ್ವೆ ಹೇಳಿದೆ.ಕಣ್ಣೂರು-ಯಶವಂತಪುರ ಎಕ್ಸ್ಪ್ರೆಸ್ ರೈಲು ಸಾಗುವಾಗ ಗುಡ್ಡ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಕಲ್ಲುಗಳು ಹಳಿಗೆ ಸಿಲುಕಿದ್ದು, ರೈಲು ಹಳಿ ತಪ್ಪಿದೆ. ರೈಲಿನ 5 ಬೋಗಿ ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿ ಸಾಗಬೇಕಾದ ಕೆಲವು ರೈಲುಗಳ ಮಾರ್ಗ ಬದಲಾಗಿದೆ.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರ ಸಂಚಾರಕ್ಕಾಗಿ ಬಸ್​ಗೆ ವ್ಯವಸ್ಥೆಯನ್ನು ಇಲಾಖೆ ಮಾಡಿದೆ ಆತಂಕದಲ್ಲಿದ್ದ ಪ್ರಯಾಣಿಕರು ನಿರಾಳರಾಗಿದ್ದಾರೆ.

RELATED ARTICLES

Related Articles

TRENDING ARTICLES