Tuesday, September 17, 2024

ಪರಿಸರ ಮಾಲಿನ್ಯ ಮುಕ್ತ ನಗರಗಳ ಪಟ್ಟಿಯಲ್ಲಿ ಬಾಗಲಕೋಟೆ

ಬಾಗಲಕೋಟೆ: ಸುಂದರ ನಗರ, ಎಲ್ಲೆಂದರಲ್ಲಿ ಕಾಣಸ್ತಿರೋ ಮರ ಗಿಡಗಳು, ವಾಯು ಮಾಲಿನ್ಯವಾಗದಂತೆ ಸ್ಚಚ್ಚತೆಯನ್ನ ಕಾಪಾಡಿಕೊಂಡು ದೇಶದ 17 ನಗರಗಳ ಪೈಕಿ ಉತ್ತಮ ರೇಟಿಂಗ್ ಪಡೆದಿರೋ ಸಿಟಿ ಬಾಗಲಕೋಟೆ.

ಹೌದು ಮುಳುಗಡೆ ನಗರಿ ಎಂದೇ ಖ್ಯಾತಿಯನ್ನ ಹೊಂದಿರೋ ಬಾಗಲಕೋಟೆ ನಗರವು ಕಳೆದ ವಾರ ದೀಪಾವಳಿ ಹಬ್ಬ ಆಚರಣೆಯ ಪಟಾಕಿ ಸಿಡಿಮದ್ದಗಳ ಆರ್ಭಟದ ಮಧ್ಯೆಯೂ ಮುಳುಗಡೆ ನಗರಕ್ಕೆ ವಾಯು ಮಾಲಿನ್ಯ ತಟ್ಟಿಲ್ಲ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿರೋ ರೇಟಿಂಗ್ನಲ್ಲಿ ಬಾಗಲಕೋಟೆ ನಗರದ ವಾತಾವರಣಕ್ಕೆ ಉತ್ತಮ ಅಂಕ ಬಂದಿದೆ.

ದೀಪಾವಳಿ ಹಬ್ಬದ ಪಟಾಕಿ ಸಂಭ್ರಮ ಸೇರಿದಂತೆ ಕಳೆದ ಒಂದು ವಾರದಲ್ಲಿನ ರಿಪೋರ್ಟ್​ನಲ್ಲಿ ದೇಶದ ಉತ್ತಮ ವಾತಾವರಣವಿರೋ 17 ನಗರಗಳ ಪೈಕಿ ಬಾಗಲಕೋಟೆ ನಗರವೂ ಕೂಡ ಸ್ಥಾನ ಪಡೆದಿರೋದು ವಿಶೇಷ. ಹೀಗಾಗಿ ಬಾಗಲಕೋಟೆ ಜನತೆ ಇನ್ನಷ್ಟು ಮಾಲಿನ್ಯಗಳನ್ನ ನಿಯಂತ್ರಿಸಿ ನಾವೆಲ್ಲಾ ಜಾಗೃತರಾಗಿ ಸ್ವಚ್ಚಂದ ಪರಿಸರದ ನಗರವನ್ನಾಗಿಸುವ ಹುಮ್ಮಸ್ಸು ಹೆಚ್ಚಿದೆ.

 

 

RELATED ARTICLES

Related Articles

TRENDING ARTICLES