Sunday, December 22, 2024

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಡಿಎನ್​ಎ ಟೆಸ್ಟ್​​ ಮಾಡಬೇಕಿದೆ – ಪ್ರಮೋದ್​ ಮುತಾಲಿಕ್​

ಬಾಗಲಕೋಟೆ: ಸೋನಿಯಾ ಗಾಂದಿ ಓಲೈಕೆಗಾಗಿ ಡಿ.ಕೆ ಶಿವಕುಮಾರ್ ಏಸುವಿನ ಪತ್ರಿಮೆ ಮಾಡಲು ಹೂರಟಿದರು, ಅವರ ಡಿಎನ್​ಎ ಟೆಸ್ಟ್ ಮಾಡಬೇಕಾಗಿದೆ ಎಂದು ಶ್ರೀರಾಮಸೇನೆ ಮುಖಂಡರಾದ ಪ್ರಮೋದ್​ ಮುತಾಲಿಕ್ ಅವರು ಹೇಳಿದ್ದಾರೆ.

ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿಯವರ ವಿಶ್ವಾಸ ಬೆಳೆಸಿಕೊಳ್ಳಲು 52 ಅಡಿ ಎತ್ತರದ ಕೈಸ್ತ ಧರ್ಮದ ಪುತ್ಥಳಿ ನಿರ್ಮಾಣ ಮಾಡುತ್ತಿದ್ದಾರೆ. ವೋಟಗಾಗಿ ಅಲ್ಲ ಯಾರಿಗೂ ಒಲೈಸಿಕೊಳ್ಳಲು ಇಂತಹ ಕಾರ್ಯ ಮಾಡುತ್ತಿರುವ ಡಿ.ಕೆ ಶಿವಕುಮಾರ್ ಅವರು, ದೇಶ ಉಳಿದರೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗುತ್ತಾರೆ ಇಲ್ಲವಾದಲ್ಲಿ ಎಲ್ಲಿ ಇರುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಇದೇ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ, ಇದೇ 12 ರಂದು‌ ಶ್ರೀರಾಮಸೇನೆವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಶಾಸಕ ಗೂಳಿಹಟ್ಟಿ ಶೇಖರ ಅವರ ತಾಯಿ ಮತಾಂತರದ ಬಗ್ಗೆ ಹೇಳಿದ್ದರು. ವಿಧಾನಸಭೆಯಲ್ಲಿ ಮತಾಂತರ ವಿಷಯ ಪ್ರಸ್ತಾಪ ಆದ ತಕ್ಷಣ. ಸರ್ಕಾರ ಮತಾಂತರಕ್ಕೆ ಬ್ರೆಕ್ ಹಾಕುವ ಕೆಲಸ ಮಾಡಿದೆ. ಆದರೆ ಮಾರನೇ ದಿನವೇ ಪಾದ್ರಿಗಳು, ನಾವು ಮತಾಂತರ ಮಾಡಿಲ್ಲ,ನಿಷೇಧ ಮಾಡಬೇಡ ಎಂದರು. ಆದರೆ, ಮತಾಂತರದ ಹಾವಳಿ ವಿಪರಿತವಾಗಿ ಬೆಳೆಯುತ್ತಿವೆ.

ಈ ಹಿನ್ನೆಲೆಯಲ್ಲಿ, ನಾಳೆ 12ರಂದು ಸಿಎಂ ಭೇಟಿಯಾಗಿ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸುತ್ತೆವೆ ಎಂದರು. ಇದೇ ಸಮಯದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಲಾಲ್ ಮುಕ್ತ ಭಾರತ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದ ಅವರು, ಹಲಾಲ್ ಬ್ರಾಡ್ ಮೂಲಕ ವಿದೇಶದಲ್ಲಿ ಹಣ ಗಳಿಸಿ, ಮುಸ್ಲಿಂ ಅಭಿವೃದ್ಧಿಗಾಗಿ ಈ ಹಣ ಬಳಸಿಕೊಳ್ಳಲಾಗಿದೆ. ಹಲಾಲ್ ಮಾಂಸ ತಿನ್ನಬೇಕು ಎಂದು ಮುಸ್ಲಿಂರು ಕರೆ ನೀಡಿದ್ದಾರೆ. ಜಗತ್ತಿನ ಆರ್ಥಿಕತೆಗೆ ಸೆಡ್ಡು ಹೊಡೆದು, ಇಸ್ಲಾಮಿಕ್ ಆರ್ಥಿಕತೆ ಬೆಳೆಸುತ್ತಿದೆ. ಎಲ್ಲ ಪ್ರೊಡಕ್ಟ್ ಗಳಿಗೆ ಹಲಾಲ್ ಸರ್ಟಿಫಿಕೇಟ್ ಚಾಲನೆ ಮುಸ್ಲಿಂರು ಚಾಲನೆ ನೀಡಿದ್ದಾರೆ.

57 ಮುಸ್ಲಿಂ ರಾಷ್ಟ್ರಗಳು ಸೇರಿ ಸಾರ್ಜಾದಲ್ಲಿ ಸಭೆ ಮಾಡಿ, ಹಲಾಲ್ ಮೂಲಕವೇ ಇಂದು ವ್ಯವಹಾರ ನಡೆಯುತ್ತೆ. ಹಲಾಲ್ ಸರ್ಟಿಫಿಕೇಟ್ ಇದ್ರೆ ಮಾತ್ರ ವಿದೇಶಕ್ಕೆ ವಸ್ತುಗಳ ರಫ್ತಿಗೆ ಅವಕಾಶ ಮಾಡಿಕೂಡಲಾಗಿದೆ. ಹಳದಿ ರಾಮನ ಪ್ರೊಡಕ್ಟ್ ಗಳು ಕೂಡಾ ಹಲಾಲ್ ಸರ್ಟಿಫಿಕೇಟ್ ತಗೆದುಕೊಂಡಿದ್ದಾರೆ. ಹಲಾಲ್ ನಿಂದ ಸಂಗ್ರಹವಾದ ದುಡ್ಡು ಟೆರರಿಸ್ಟ್ ಗಳ ಬಿಡುಗಡೆಗೆ ಹೊಗುತ್ತಿದೆ ಎಂದು ಆರೋಪಿಸಿದರು.

ಇದೇ ಸಮಯದಲ್ಲಿ,ನಟ ಪುನೀತ್ ಅವರಿಗೆ ಪ್ರಶಸ್ತಿ ನೀಡುವ ವಿಚಾರವಾಗಿ ಮಾತನಾಡಿ, ಪುನೀತ್ ಅವರ ನಟನೆ ಅದ್ಬುತವಾದದ್ದು, ರಾಜಕುಮಾರ್ ಅವರ ಹೆಸರು ಮೀರಿಸುವ ವ್ಯಕ್ತಿತ್ವ ಹೊಂದಿದ ವ್ಯಕ್ತಿ. ಸಮಾಜಕ್ಕೆ ಒಳ್ಳೆಯ ಮೇಸೆಜ್ ರವಾನೆ ಮಾಡುವ ಪುನೀತ್, ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಅನ್ನೋದರಲ್ಲಿ ತಪ್ಪಿಲ್ಲ. ನಾನು ಕೂಡಾ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೆನೆ ಎಂದರು.

ವರದಿ: ನಿಜಗುಣ ಮಠಪತಿ, ಬಾಗಲಕೋಟೆ 

RELATED ARTICLES

Related Articles

TRENDING ARTICLES