Wednesday, January 22, 2025

ದೇಹದ ಚೈತನ್ಯಕ್ಕೆ ಕುಡಿಯಿರಿ ಹರ್ಬಲ್ ಟೀ

ಬಿಸಿ ಚಹಾವನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಕೆಲವೊಂದು ವರದಿಗಳ ಪ್ರಕಾರ, ಬಿಸಿ ಚಹಾ ಸೇವಿಸುವುದು ಹೆಚ್ಚಿನ ಆರೋಗ್ಯ ಲಾಭಗಳನ್ನು ಒಳಗೊಂಡಿದೆ. ಉದಾಹರಣೆಗೆ ಗ್ರೀನ್ ಟೀ ಸೇವಿಸುವುದರಿಂದ ಅದರಲ್ಲಿರುವ ಹೆಚ್ಚಿನ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಆದರೆ ಈ ರೀತಿಯ ಚಹಾವನ್ನು ತಯಾರಿಸಲು ಯಾವ ರೀತಿಯ ಚಹಾ ಪುಡಿಯನ್ನು ಬಳಸುತ್ತೀರ ಮತ್ತು ನಿಮ್ಮ ದೇಹವು ಎಷ್ಟು ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಹೊಂದಿದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಹರ್ಬಲ್ ಟೀ ಅಥವಾ ಚಹಾದೊಂದಿಗೆ ಬಳಸಬಹುದಾದ ಗಿಡಮೂಲಿಕೆಗಳ ಬಗ್ಗೆ ನಾವ್ ಹೇಳ್ತೀವಿ ನೋಡಿ.

ತುಳಸಿ..!

ತುಳಸಿ ಗಿಡದಲ್ಲಿ ದೇವದೇವತೆಗಳು ನೆಲೆಸಿರುವರು ಎಂದು ಪುರಾಣಗಳು ಕೂಡ ಹೇಳಿವೆ. ಅದೇ ರೀತಿಯಲ್ಲಿ ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗಿದೆ. ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳಿವೆ. ಸಾಮಾನ್ಯವಾಗಿ ವಿಟಮಿನ್ ಸಿ ಮತ್ತು ಸತುಗಳಿಂದ ತುಂಬಿರುತ್ತದೆ. ಇದು ಆ್ಯಂಟಿ ವೈರಲ್ ಬ್ಯಾಕ್ಟೀರಿಯಾಮತ್ತು ಶಿಲೀಂಧ್ರ ವಿರೋಧಿ ಗುಣಗಳಿಂದ ಕೂಡಿದೆ. ಇದನ್ನು ಪ್ರತಿನಿತ್ಯ ಚಹಾ ಅಥವಾ ಕಷಾಯದಲ್ಲಿ ಸೇವಿಸಿ ಕುಡಿಯಬಹುದಾಗಿದೆ. ತುಳಸಿ ಟೀ ದೇಹದ ತೂಕವನ್ನು ಇಳಿಸಲು ಬಹಳ ಸಹಕಾರಿಯಾಗಿದೆ. ತುಳಸಿಯ ಎಲೆಗಳಲ್ಲಿರುವ ಪೋಷಕಾಂಶಗಳು ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಜೀವ ರಾಸಾಯನಿಕೆ ಕ್ರಿಯೆ ಶೀಘ್ರವಾದಷ್ಟೂ ಬೇಗಬೇಗನೇ ಕ್ಯಾಲೋರಿಗಳೂ ಕರಗುತ್ತವೆ. ಇದು ಆ್ಯಂಟಿ ಆಕ್ಸಿಡೆಂಟ್ ಸಂಯುಕ್ತಗಳಾದ ರೋಸ್ಮರಿನಿಕ್ ಆಮ್ಲಗಳನ್ನು ಒಳಗೊಂಡಿದೆ. ಇದು ಉಸಿರಾಟದ ಸಮಸ್ಯೆ ಪರಿಹರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 

RELATED ARTICLES

Related Articles

TRENDING ARTICLES