Wednesday, December 18, 2024

ಬದ್ಧ ವೈರಿ ಮನೆಗೆ ದಿಢೀರ್​ ಭೇಟಿ ನೀಡಿದ ಸಂಸದ ಅನಂತ ಕುಮಾರ್ ಹೆಗ್ಡೆ

ಕಾರವಾರ: ಮಾಜಿ ಸಚಿವ ಹಾಗೂ ಹಾಲಿ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಅವರ ರಾಜಕೀಯ ವೈರಿ ಎಂದೇ ಬಿಂಬಿತ್ತವಾಗಿದ್ದ ಸಂಸದ ಅನಂತಕುಮಾರ್ ಅವರು ಇಂದು ದಿಢೀರ ಆಗಿ ಆನಂದ ಅಸ್ನೋಟಿಕರ್ ಅವರ ಮನಗೆ ಭೇಟಿ ನೀಡಿರೋದು ಕಾರವಾರ ಕ್ಷೇತ್ರದಲ್ಲಿ ಅಷ್ಟೆ ಅಲ್ಲದೇ ಇಡೀ ರಾಜಕೀಯ ವಲಯದಲ್ಲೇನೆ ಸಂಚಲನ ಮೂಡಿಸುವಂತಾಗಿದೆ. ಆನಂದ ಅಸ್ನೋಟಿಕರ್ ಹಾಗೂ ಬಿಜೆಪಿ ಸಂಸದ ಅನಂತಕುಮಾರ ಹೆಗ್ಗಡೆ ರಾಜಕೀಯವಾಗಿ ಬದ್ದವೈರಿಗಳು ಅನ್ನೊಂದು ಎಲ್ಲರಿಗೂ ಗೋತ್ತಿರೋ ವಿಚಾರ. ಆದರೆ, ಇಂದು ಅನಂತಕುಮಾರ ಹೆಗಡೆ ಆನಂದ ಅಸ್ನೋಟಿಕರ್ ಅವರ ಮನೆಗೆ ಭೇಟಿ ನೀಡಿ ಆನಂದ್ ಅಸ್ನೋಟಿಕರ್ ತಾಯಿ ವಿಧಾನಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್ ಆರೋಗ್ಯ ವಿಚಾರಿಸಿದರು. ಶುಭಲತಾ ಅಸ್ನೋಟಿಕರ್ ಕಳೆದ ಎರಡು ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಇದೀಗ ಕಾರವಾರದ ಪಾದ್ರಿಬಾಗದಲ್ಲಿರೋ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಈ ವಿಚಾರ ತಿಳಿದ ಅನಂತಕುಮಾರ ಹೆಗಡೆ ಇಂದು ಅವರ ಮನೆಗೆ ಭೇಟಿ ನೀಡಿ ಶುಭಲತಾ ಅವರ ಆರೋಗ್ಯವೇನೋ ವಿಚಾರಿಸಿದ್ದಾರೆ.ಆನಂದ ಮನೆಗೆ ಸಂಸದ ಅನಂತಕುಮಾರ ಹೆಗಡೆ ಭೇಟಿ ನೀಡಿದ ಉದ್ದೇಶವೆ ಬೇರೆ ಇದೆ ಅಂತಾ ಇದೀಗ ರಾಜಕೀಯ ಪಂಡಿತರು ವಿಶ್ಲೇಷಣೆ ‌ಮಾಡೋದಕಕ್ಕೆ ಆರಂಭಿಸಿದ್ದಾರೆ‌. ರಾಜಕೀಯ ವಿಶ್ಲೇಷಕರು ಹೇಳೋ ಪ್ರಕಾರ ಹಾಲಿ ಶಾಸಕರಿಗೆ ಹಾಗೂ ಸಂಸರ ನಡುವಿನ ರಾಜಕೀಯ ಸಂಬಂಧಗಳು ಈ ಹಿಂದಿನಂತೆ ಇಲ್ಲವಂತೆ. ಹೀಗಾಗಿ ಈ ಕ್ಷೇತ್ರದಲ್ಲಿ ರಾಜಕೀಯ ಹೊಸ ತಂತ್ರಗಾರಿಕೆ ಆರಂಭವಾಗಿದೆ ಅಂತಾನೇ ಹೇಳಾಗತ್ತಾ ಇದೆ. ಅನಂತಕುಮಾರ ಹೆಗಡೆ ಅವರು ಶುಭಲತಾ ಅವರ ಜೊತೆ ಇಂದು ಮಾತ್ನಾಡಿರೋ ದಾಟಿಯನ್ನ ನೋಡಿದ್ರೆ ಆನಂದ ಅಸ್ನೋಟಿಕರ್ ಅವರಿಗೆ ಬಿಜೆಪಿಗೆ ಕರೆತರೋ ಎಲ್ಲಾ ಪ್ರಯತ್ನಗಳು ನಡೆದಿರಬಹುದಾ ಎನ್ನಲಾಗತ್ತಾ ಇದೆ.

ರಾಜಕೀಯವಾಗಿ ಆನಂದ ಅಸ್ನೋಟಿಕರ್ ಹಾಗೂ ಸಂಸದ ಅನಂತಕುಮಾರ ಹೆಗಡೆ ಕಳೆದ ಹತ್ತು ವರ್ಷಗಳಿಂದ ಬದ್ದವೈರಿಗಳಾಗಿದ್ದವರು. ಕಳೆದ ಚುನಾವಣೆ ಸಂದರ್ಭದಲ್ಲಿ ಇದೆ ಆನಂದ ಅಸ್ನೋಟಿಕರ್ ಬಿಜೆಪಿ ಸೇರಬೇಕು ಅಂತಾ ಮನಸ್ಸು ಮಾಡಿ ಬಿಜೆಪಿಯ ರಾಷ್ಟ್ರೀಯ ನಾಯಕರಿಂದಲ್ಲೂ ಒಪ್ಪಿಗೆ ಸಹ ಸಿಕ್ಕಿತ್ತು.ಆದ್ರೆ ಸಂಸದ ಅನಂತಕುಮಾರ ಹೆಗಡೆ ಮಾತ್ರ ಆನಂದ ಅಸ್ನೋಟಿಕರ್ ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳಬಾರದು ಅಂತಾ ರಾಷ್ಟ್ರೀಯ ನಾಯಕರ ಮೇಲೆ ಭಾರೀ ಒತ್ತಡವನ್ನ ಸಹ ಹಾಕಿದ್ರು.ಇದೇ ವಿಚಾರವಾಗಿ ಆನಂದ ಅಸ್ನೋಟಿಕರ್ ಅನಂತಕುಮಾರ ಮನೆ ಬಾಗಿಲವರೆಗೆ ಹೋಗಿದ್ದರು ಅಂದು ಅನಂತಕುಮಾರ ಆನಂದ ಅವರನ್ನ ಹತ್ತಿರಕ್ಕೂ ಕರೆದುಕೊಂಡಿರಲಿಲ್ಲಿ ಇದಾದ ಬಳಿಕ ಇಬ್ಬರ ನಡುವೆ ಮತ್ತಷ್ಟು ವೈರತ್ವ ಹೆಚ್ಚಾಗಿತ್ತು. ಆನಂದ ಅಸ್ನೋಟಿಕರ್ ಅದೆಷ್ಟೋ ಭಾರಿ ಸಂಸದ ವಿರುದ್ಧ ಹರಿಹಾಯ್ದಿದ್ದು ಇದೆ. ಆದ್ರೆ ರಾಜಕೀಯದಲ್ಲಿ ಯಾರು ವೈರಿಗಳು ಅಲ್ಲ ಸ್ನೇಹಿತರು ಅಲ್ಲ ಅನ್ನೋಂದು ಸಾಭೀತಾಗತ್ತಾನೆ ಬಂದಿದೆ. ಇವರಿಬ್ಬರ ನಡುವೆಯೂ ಅದು ಸತ್ಯವಾದ್ರೆ ಯಾರೂ ಕೂಡ ಅಚ್ಚರಿ ಪಡಬೇಕಾಗಿಲ್ಲ. ಆನಂದ ಅಸ್ನೋಟಿಕರ್ ಸಹ ಅನೇಕ‌ ಭಾರೀ ತಾನು ರಾಷ್ಟ್ರೀಯ ಪಕ್ಷವನ್ನ ಸೇರಬೇಕು ಅಂತಾ ಹೇಳಿಕೊಂಡು ಬರತ್ತಾನೆ ಇದ್ದಾರೆ. ಕೆಲ ದಿನಗಳ ಹಿಂದೆ ಸಹ ಕಾರವಾರದಲ್ಲಿ ಕರೆದ ಪತ್ರಿಕಾಗೋಷ್ಠಿಯೊಂದರಲ್ಲಿಯೂ ಸಹ ಆ ಮಾತನ್ನೆ ಪುನರ್ ಉಚ್ಚರಿಸಿದರು.

ಅಷ್ಟೇ ಅಲ್ಲದೇನೆ ಅನಂತಕುಮಾರ ಅವರ ಬಗ್ಗೆ ಸಹ ಒಂದೇರಡು ಒಳ್ಳೆಯ ಮಾತುಗಳನ್ನ ಆಡಿಹೋಗಿದರು.‌ ಇವೇಲ್ಲವನ್ನ ಸೂಕ್ಷ್ಮವಾಗಿ ಗಮನಸಿದ್ರೆ. ಸರಿಯಾದ ಸಮಯ, ಸಂದರ್ಭ ನೋಡಿ ರಾಜಕೀಯ ತಂತ್ರಗಾರಿಕೆ ಮಾಡೋದಕ್ಕೆ ಈ ಇಬ್ಬರೂ ನಾಯಕರು ಕಾಯುತ್ತಾ ಇದ್ದರು ಅಂತಾ ಅವರ ಆಪ್ತವಲಯದಿಂದಲ್ಲೇ ಕೇಳಲಾರಂಬಿಸಿದೆ‌.

ಹಾಲಿ ಶಾಸಕರಿಗೆ ಪಕ್ಷದ ಟಿಕೇಟ್ ಕೊಡಿಸುವುದರಿಂದ ಅವರನ್ನ ಗೆಲ್ಲಿಸುವವರಗೂ ಸಂಸದ ಅನಂತಕುಮಾರ ಹೆಗಡೆ ಅವರ ಶ್ರಮ ಸಾಕಷ್ಟು ಇದೆ ಅಂತಾ ಇಗಲ್ಲೂ ಬಿಜೆಪಿಯ ಅನೇಕ ಮುಖಂಡರು ಆಗಾಗ ಚರ್ಚೆ ಮಾಡತ್ತಾನೆ ಇದ್ದಾರೆ‌. ಹೀಗಿರುವಾಗ ಕೆಲವೊಂದು ರಾಜಕೀಯ ವಿಚಾರದಲ್ಲಿ ಹಾಲಿ ಶಾಸಕರ ಹಾಗೂ ಸಂಸದರ ನಡುವೆ ರಾಜಕೀಯ ವೈಮನಸ್ಸು ಉಂಟಾಗಿದೆ ಎನ್ನಲಾಗತ್ತಾ ಇದೆ‌.ಈ ಕಾರಣಕ್ಕಾಗಿಯೇ ಅನಂತಕುಮಾರ ಹೆಗಡೆ ಕಾರವಾರ ಕ್ಷೇತ್ರದಲ್ಲಿ ರಾಜಕೀಯ ಪರಿವರ್ತನೆ ಮುಂದಾಗತ್ತಾ ಇದ್ದಾರ ಅನ್ನೋ ಮಾತು ಇದೀಗ ಅನಂತಕುಮಾರ ಆನಂದ ಮನೆಗೆ ಭೇಟಿ ನೀಡಿದ ಬಳಿಕ ಸುಂಟರಗಾಳಿಯಂತೆ ಸುಳಿಯಲಾರಂಭಿಸಿದೆ.

RELATED ARTICLES

Related Articles

TRENDING ARTICLES