ಬೆಂಗಳೂರು : ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಮಾತನಾಡಬಾರದೆಂದು ಜಮೀರ್ ಅಹ್ಮದ್ ಖಾನ್ ಗೆ ತಾಕೀತು ಮಾಡಿದ್ದಾರೆ.
ಗೆಸ್ಟ್ ಹೌಸ್ ವಿಚಾರದಲ್ಲಿ ಏಕವಚನದಲ್ಲಿ ಕುಮಾರಸ್ವಾಮಿ ವಿರುದ್ಧ ಜಮೀರ್ ಅಹ್ಮದ್ ಖಾನ್ ಮಾತನಾಡಿದ್ದರು. ಕುಮಾರಸ್ವಾಮಿ ವಿರುದ್ಧ ಮಾತನಾಡಿದರೆ ಒಕ್ಕಲಿಗರು ಕಾಂಗ್ರೆಸ್ ವಿರುದ್ಧ ಸಿಡಿದೇಳುವ ಭೀತಿ ಇದೆ ಎಂದು ತಾಕೀತು ಮಾಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತಗಳು ಕಾಂಗ್ರೆಸ್ ಕೈತಪ್ಪುವ ಭೀತಿ ಶುರುವಾಗಿರುವುದರಿಂದ ಪೋನ್ ಮೂಲಕ ಇನ್ಮುಂದೆ ಹೆಚ್.ಡಿ.ಕೆ. ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಜಮೀರ್ ಅಹ್ಮದ್ ಗೆ ಡಿ.ಕೆ.ಶಿವಕುಮಾರ್ ವಾರ್ನಿಂಗ್ ಕೊಟ್ಟಿದ್ದಾರೆ.