ಬೆಂಗಳೂರು : ಡಿಸಿಎಂ ಅಶ್ವಥ್ ನಾರಾಯಣ್ ನಿವಾಸಕ್ಕೆ ಬೆಂಗಳೂರಿನ ಮಠಾಧೀಶರು ಭೇಟಿ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ನಾಯಕತ್ವ ಬದಲಾವಣೆ ಕೂಗಿನ ಬೆನ್ನಲ್ಲೇ ಸ್ವಾಮಿಜೀಗಳು ಅಖಾಡಕ್ಕಿಳಿದ್ದಿದ್ದಾರೆ. ಸ್ವಾಮಿಜೀಗಳು ರಾಜ್ಯದಲ್ಲಿ ನಾಯಕತ್ವ ಬಯಸಿದರಾ? ಯಡಿಯೂರಪ್ಪಗೆ ಪರ್ಯಾಯ ನಾಯಕನ ಹುಡುಕಿದರಾ ಶ್ರೀಗಳು ಎಂಬುವುದು ಕೂತುಹಲ ಮೂಡಿಸಿದೆ. ಅಶ್ವಥ್ ನಾರಾಯಣ್ ಮನೆಯಲ್ಲಿ ಶ್ರೀಗಳು ಎನು ಚರ್ಚೆ ನಡೆಸಿದ್ದಾರೆ ಎಂಬ ಪ್ರಶ್ನೆ ಉಂಟಾಗಿದೆ.
ಸ್ವಾಮಿಜೀಗಳು, ಡಿಸಿಎಂ ಅಶ್ವಥ್ ನಾರಯಣ್ ಜೊತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರಾ ಎಂಬ ಅನುಮಾನ ಮುಡುತ್ತಿದೆ. ಕಳೆದ ಎರಡು ದಿನಗಳಿಂದ ಬಿ ವೈ ವಿಜಯೇಂದ್ರ ಮುರುಘಾ ಮಠ, ಸಿದ್ಧಗಂಗಾ ಮಠ ಸೇರಿ ಹಲವು ಮಠಗಳಿಗೆ ಭೇಟಿ ನೀಡಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಗೆ ಸಂಕಷ್ಟ ಬಂದಾಗ ಎಲ್ಲಾ ಮಠಾಧೀಶರು ಬೆನ್ನಿಗೆ ನಿಲ್ಲುತ್ತಿದ್ದರು. ಸ್ವಾಮಿಜೀಗಳೇ ಯಡಿಯೂರಪ್ಪ ನಿವಾಸಕ್ಕೆ ಬಂದು ಬೆಂಬಲಿಸುತ್ತಿದ್ದರು. ಆದರೆ ಈ ಬಾರಿ ಯಾವ ಮಠಾಧೀಶರು ಸಿಎಂ ಬಿಎಸ್ ಯಡಿಯೂರಪ್ಪ ಪರ ಮಾತನಾಡಿರಲಿಲ್ಲ. ಈ ಹಿನ್ನಲೆಯಲ್ಲಿ ವಿಜಯೇಂದ್ರ ಮಠಗಳಿಗೆ ಭೇಟಿ ನೀಡಿದ್ದರು.