Monday, December 23, 2024

ಇಂದು ಉಪಚುನಾವಣೆಯ ಕ್ಷೇತ್ರಗಳಲ್ಲಿ ನಡೆದ ಮತದಾನ

ಬೆಳಗಾವಿ: ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಇಂದು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದೆ. ಬೆಳಿಗ್ಗೆ 9 ಗಂಟೆಯವರೆಗೆ ಶೇ.5.47 ಮತದಾನದ ಪ್ರಕ್ರಿಯೆ ನಡೆದಿದ್ದು, ಅರಭಾವಿಯಲ್ಲಿ 5.20, ಗೋಕಾಕ್ ನಲ್ಲಿ 5.88 ಹಾಗೂ ಬೆಳಗಾವಿ ಉತ್ತರದಲ್ಲಿ  ಶೇ 2.5 ರಷ್ಟು ಮತದಾನವ ನಡೆದಿದೆ. ಇನ್ನೂ ಬೆಳಗಾವಿ ದಕ್ಷಿಣದಲ್ಲಿ 2.8, ಬೆಳಗಾವಿ ಗ್ರಾಮೀಣದಲ್ಲಿ 9, ಬೈಲಹೊಂಗಲದಲ್ಲಿ 5.5 ರಷ್ಟು ವೋಟಿಂಗ್ ನಡೆದಿದೆ. ಸವದತ್ತಿಯಲ್ಲಿ 6.89 ಮತದಾನವಾದರೆ, ರಾಮದುರ್ಗದಲ್ಲಿ 6.45 ರಷ್ಟು ಮತದಾನವಾಗಿವೆ. ‘

ಮಸ್ಕಿ: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ, ಇದುವರೆಗೂ ಶೇ11.23 ರಷ್ಟು ಮತದಾನ ನಡೆದಿದ್ದು, 13,115 ಪುರುಷರು ಮತ್ತು 10,065 ಮಹಿಳೆಯರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ಇಲ್ಲಿಯ ತನಕ ಒಟ್ಟಾರೆ 23,190 ಮತಗಳ ಚಲಾವಣೆಯಾಗಿವೆ.

ಬಸವಕಲ್ಯಾಣ: ಬಸವಕಲ್ಯಾಣ ವಿಧಾನಸಭೆಯ ಕ್ಷೇತ್ರದಲ್ಲಿ ಶೇ.7.46 ರಷ್ಟು ಮತ ಚಲಾವಣೆಯಾಗಿದ್ದು, ಕೆಲವೊಂದು ಕಡೆ ಕಡಿಮೆ ಸಂಖ್ಯೆಯಲ್ಲಿ ಮತದಾನ ನಡೆದರೆ, ಇನ್ನು ಕೆಲವು ಕ್ಷೇತ್ರದಲ್ಲಿ  ಜನರು ಕ್ಯೂ ನಿಂತು ಮತದಾನ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES