ಬೆಂಗಳೂರು : ಸಾರಿಗೆ ಮುಷ್ಕರ ಯಾವಾಗ ಅಂತ್ಯವಾಗುತ್ತೋ ಗೊತ್ತಿಲ್ಲ. ಸಾರಿಗೆ ಸಮಸ್ಯೆ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ನೌಕರರು ದಿನದಿಂದ ದಿನಕ್ಕೆ ಪ್ರತಿಭಟನೆ ತೀವ್ರ ಗೊಳಿಸುತ್ತಿದ್ದಾರೆ. ನಾಡಿನ ಜನತೆ ಎಲ್ಲರೂ ಯುಗಾದಿ ಸಂಬ್ರಮದಲ್ಲಿದ್ದಾರೆ ಆದರೆ ಈ ಬಾರಿ ಸಾರಿಗೆ ನೌಕರರಿಗೆ ಆ ಸಂತಸವಿಲ್ಲ.
7ನೇ ದಿನಕ್ಕೆ ಕಾಲಿಟ್ಟಿರುವ ನೌಕರರ ಮುಷ್ಕರಕ್ಕೆ ಸರ್ಕಾರ ಸ್ಪಂದಿಸುವ ಯಾವ ಸೂಚನೆಯೂ ಸಿಗುತ್ತಿಲ್ಲ. ಇಂದು ತಟ್ಟೆ, ಲೋಟ ಹಿಡಿದು ಭಿಕ್ಷೆಬೇಡಿ ಪ್ರತಿಭಟನೆ ಮಾಡುತ್ತಿರುವ ನೌಕರರನ್ನು ನೋಡಿದರೆ ಯಾರಾದರೂ ಒಮ್ಮೆ ಮರುಗುತ್ತಾರೆ.
ಜಿದ್ದಿಗೆ ಬಿದ್ದ BSY ಸರ್ಕಾರ ನೌಕರರ ಮಾರ್ಚ್ ತಿಂಗಳ ವೇತನವನ್ನು ತಡೆಹಿಡಿದಿದೆ. ಸಮಸ್ಯೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾರಿಗೆ ನೌಕರರು ಮಾರ್ಚ್ ಸಂಬಳ ಬಿಡುಗಡೆ ಮಾಡಿ, ಬೇಡಿಕೆ ಈಡೇರಿಸುವಂತೆ ಒತ್ತಾಯ ಮುಂದುವರೆಸಿದ್ದಾರೆ.