Wednesday, October 30, 2024

ಮೈಸೂರಿನಲ್ಲಿ ಸುದ್ದಿಗೋಷ್ಠಿ ಕರೆದಿರುವ ಈಶ್ವರಪ್ಪ

ಮೈಸೂರು : ಕೆ.ಎಸ್. ಈಶ್ವರಪ್ಪ ಇಂದು ಕುಟುಂಬ ಸಮೇತರಾಗಿ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಸಿಎಂ ಜೊತೆ ಈಶ್ವರಪ್ಪ ಅವರ ಮುಸುಕಿನ ಗುದ್ದಾಟ ನಡೆದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಅನುಧಾನ ಬಿಡುಗಡೆ ವಿವಾದ ತೀವ್ರವಾದಂತೆ ಕಾಣುತ್ತಿದೆ. 

ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ಈಶ್ವರಪ್ಪ ಅವರ ವಿರುದ್ಧ ಸಹಿ ಸಂಗ್ರಹಿಸಿದ್ದ ಸಿಎಂ ಆಪ್ತರು. ಈಶ್ವರಪ್ಪ ನಡೆಗೆ ಸಿಎಂ ಆಪ್ತ ಸಚಿವ, ಶಾಸಕರು ಅಸಮಧಾನ ವ್ಯಕ್ತಪಡಿಸಿದ್ದರು. ಈಶ್ವರಪ್ಪಗೆ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಶುರುವಾಗಿದೆ.  

12 ಗಂಟೆಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ಕರೆದಿರುವ ಈಶ್ವರಪ್ಪ, ಪತ್ರ ಬರೆದ ವಿಚಾರದ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. 

RELATED ARTICLES

Related Articles

TRENDING ARTICLES