Thursday, January 23, 2025

ಬಜೆಟ್ ಮಂಡನೆಯಲ್ಲಿ ಯಾವ ವಲಯಕ್ಕೆ ಎಷ್ಟು ಅನುದಾನ?

ಬೆಂಗಳೂರು: ರಾಜ್ಯ ಬಜೆಟ್ ಮಂಡನೆ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗ, ನೆರೆ ಹಾವಳಿಯಿಂದ ಸಂಕಷ್ಟ ಎದುರಾಗಿತ್ತು. ಎಲ್ಲಾ ಸಂಕಷ್ಟಗಳನ್ನ ಸರ್ಕಾರ ಸಮರ್ಥವಾಗಿ ಎದುರಿಸಿ ನಿಂತಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಕೆಲಸ ಮಾಡಿದೆ. ಆರೋಗ್ಯ ಕಾರ್ಯಕರ್ತರಿಂದ ಹಿಡಿದು, ವೈದ್ಯರವರೆಗೆ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕೊರೋನಾ ಕಾಲದಲ್ಲಿ ಮಾನವ ಕುಲಕ್ಕೆ ಸಾಕಷ್ಟು ತೊಂದರೆ ಆಯ್ತು. ಕಣ್ಣಿಗೆ ಕಾಣದ ಶತ್ರುವಿನ ವಿರುದ್ಧ ಜನತೆ ಸಮರ್ಥವಾಗಿ ಹೋರಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಹೋರಾಟವನ್ನು ಮೆಚ್ಚಿಕೊಳ್ಳಲಾಯಿತು. ಕರ್ನಾಟಕ ಸರ್ಕಾರವು ಕೊವಿಡ್​ ನಿಯಂತ್ರಣಕ್ಕೆ ಗಮನಾರ್ಹ ಕೆಲಸ ಮಾಡಿದೆ. ಕೊರೋನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಯಶಸ್ಸು ಕಂಡಿದೆ. ಕೊರೋನಾ ನಿರ್ವಹಣೆ, ನಿಯಂತ್ರಣ, ಲಸಿಕೆ ಹಂಚಿಕೆಯಲ್ಲಿ ರಾಜ್ಯದ ಸಾಧನೆ ಗಮನಾರ್ಹವಾಗಿದೆ ಎಂದರು.

ಕೊರೋನಾ ನಿರ್ವಹಣೆಗೆ 5,372 ಕೋಟಿ ರೂ. ವೆಚ್ಚ ಮಾಡಲಾಗಿದೆ. ಫೆಬ್ರವರಿ ಅಂತ್ಯಕ್ಕೆ ಕೋರೋನಾ ಸೋಂಕು ಪತ್ತೆಗೆ 1.91 ಕೋಟಿ ಮಂದಿಗೆ ಆರ್​​ಟಿಪಿಸಿಆರ್​​ ಟೆಸ್ಟ್ ಮಾಡಿಸಲಾಗುತ್ತದೆ. ಒಟ್ಟು 9.53 ಲಕ್ಷ ಕೋವಿಡ್​-19 ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಮೊದಲ 3 ತಿಂಗಳು ರಾಜಸ್ವ ಸಂಗ್ರಹದಲ್ಲಿ ತೀವ್ರ ಹಿಂಜರಿಕೆ ಉಂಟಾಗಿದೆ ಎಂದರು.

ರಾಜ್ಯದ ಬಜೆಟ್​ ಗಾತ್ರ 2 ಲಕ್ಷ 43 ಸಾವಿರ ಕೋಟಿ ಆಗಿದೆ. ಮಹಿಳೆಯರಿಗೆ 60 ಸಾವಿರ ಉದ್ಯೋಗ ಕಲ್ಪಿಸುವ ಯೋಜನೆ. ಮಹಿಳಾ ಉದ್ಯಮಿಗಳಿಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ. ವನಿತಾ ಸಂಗಾತಿ ಹೆಸರಲ್ಲಿ ಬಿಎಂಟಿಸಿ ಹೊಸ ಬಸ್​. ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಮೀಸಲಾತಿ. ಮಹಿಳಾ ಉದ್ಯಮಿಗಳಿಗೆ 2 ಕೋಟಿವರೆಗೂ ಸಾಲ ಯೋಜನೆ. ಪೊಲೀಸ್​ ಠಾಣೆಗಳಲ್ಲಿ 7500 ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ. ನಿರ್ಭಯ ಯೋಜನೆಯಡಿ ಕ್ಯಾಮೆರಾ ಅಳವಡಿಕೆ. ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನ ಕೇಂದ್ರ ಆರಂಭ.

ಯಾದಗಿರಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ 1478 ಕೋಟಿ ಮೀಸಲು.  ಬಲ್ಕ್​​​ ಡ್ರಗ್​ ಪಾರ್ಕ್​​ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರಸ ನೇರವಿನೊಂದಿಗೆ 166 ಕೋಟಿ ರೂ. ಮೀಸಲಿಡಲಾಗಿದೆ. ಮಂಗಳೂರಿನ ಗಂಜಿ ಮಠದಲ್ಲಿ ಪ್ಲಾಸ್ಟಿಕ್ ಪೆಟ್ರೋಕೆಮಿಕಲ್ ಪ್ರೋತ್ಸಾಹಿಸಲು 3 ಎಕರೆ ಭೂಮಿಯನ್ನು ಪಡೆದುಕೊಳ್ಳಲಾಗಿದೆ.

ಪೀಣ್ಯಾದಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣಕ್ಕೆ 100 ಕೋಟಿ ರೂ. ಮೀಸಲು. ಮುಂದಿನ ಮೂರು ವರ್ಷದಲ್ಲಿ 10 ಸಾವಿರ ಕೋಟಿ ಬಂಡವಾಳ ಆಕರ್ಷಿಸಲು ಯೋಜನೆಯನ್ನು ರೂಪಿಸಲಾಗಿದೆ.

ನೇಕಾರ್​ ಸಮ್ಮಾನ್​​​​ ಯೋಜನೆಯಡಿ ನೇಕಾರರಿಗೆ 2000 ಕೋಟಿ ನೇರ ವರ್ಗಾವಣೆ. ಬಾಗಲಕೋಟೆಯ ಗುಳೇದಗುಡ್ಡದಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್​​​​​ ನಿರ್ಮಾಣ. ರಸ್ತೆ ಸುರಕ್ಷಾ ನಿಧಿಯಿಂದ 18 ಕೋಟಿ ಯೋಜನೆ. 1173 ಕಿ.ಮೀ. ರೈಲ್ವೆ ಯೋಜನೆಗೆ ಕೈಗೆ ಎತ್ತಿಕೊಳ್ಳಲು ಸರ್ಕಾರದಿಂದ 3991 ಕೋಟಿ. ಧಾರವಾಡ, ಕಿತ್ತೂರು, ಬೆಳಗಾವಿ 73 ಕಿ.ಮೀ ಉದ್ದದ ರೈಲು ಮಾರ್ಗಕ್ಕೆ 463 ಕೋಟಿ ಅನುದಾನ. ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಗೆ 175 ಕೋಟಿ ಅನುದಾನ. ಪ್ರವಾಸೋದ್ಯಮಕ್ಕೆ ಪೂರಕವಾಗುವ ಜಲ ಮಾರ್ಗಗಳ ನಿರ್ಮಾಣಕ್ಕೆ 60 ಕೋಟಿ.

ಗ್ರಾಮೀಣ ಜನತೆಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಜಲಧಾರೆ ಯೋಜನಗೆ 6201 ಕೋಟಿ ಅನುದಾನ.  ರಾಜ್ಯದ 91 ಲಕ್ಷ ಗ್ರಾಮೀಣ ಕುಟುಂಬಗಳಿಗೆ ನೀರು ಒದಗಿಸಲು ಮನೆಮನೆಗೆ ಗಂಗೆ ಯೋಜನೆ ಕಲ್ಯಾಣ ಕರ್ನಾಕಟ ಪ್ರದೇಶಾಭಿವೃದ್ಧಿಗೆ 1500 ಕೋಟಿ ಅನುದಾನ ನೀಡಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ 3000 ಕೋಟಿ ಅನುದಾನ. ಕರ್ನಾಕಟ ನೀರು ಸರಬರಾಜು, ಒಳಚರಂಡಿ ಮಂಡಳಿಯ ಯೋಜನೆಗೆ 900 ಕೋಟಿ ಅನುದಾನ. ನಗರ ವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಅಮೃತ್​​​ ನೀರು ಪರೀಕ್ಷಾ ಪ್ರಯೋಗಾಲಯಕ್ಕೆ 17 ಕೋಟಿ ಅನುದಾನ.

5 ಮಹಾನಗರ ಪಾಲಿಕೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. 10 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾರ್ಯ ಯೋಜನೆ. ಮಲೆನಾಡು, ಕರಾವಳಿಯಲ್ಲಿ ಕಾಲುಸಂಕಗಳ ನಿರ್ಮಿಸಲು ಗ್ರಾಮ ಬಂಧು ಸೇತುವೆ ಯೋಜನೆಗೆ 100 ಕೋಟಿ ಅನುದಾನ. ಕೊಡಗು ಜಿಲ್ಲೆಯ ಪುನರ್​​​ ಅಭಿವೃದ್ಧಿಗೆ 100 ಕೋಟಿ ಅನುದಾನ. ಬೆಳಗಾವಿಯಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ 140 ಕೋಟಿ. ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮೀಸಲಿಡಲಾಗಿದೆ. ಬ್ರಾಹ್ಮಾಣ ಅಭಿವೃದ್ದಿ ಮಂಡಳಿಗೆ 50 ಕೋಟಿ.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 150 ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಕ್ರಮ. ಮೆಟ್ರಿಕ್​​ ನಂತರದ ವಿದ್ಯಾರ್ಥಿ ನಿಲಯಗಳ ಅಭಿವೃದ್ಧಿಗೆ 10 ಕೋಟಿ ಮೀಸಲು. ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1500 ಕೋಟಿ ಕ್ರಿಶ್ಚಿಯನ್​​ ಸಮುದಾಯದ ಅವೃದ್ಧಿಗೆ 200 ಕೋಟಿ.

ಜೈನಕಾಶಿ ಶ್ರವಣ ಬೆಳಗೊಳದಲ್ಲಿ ಮೂಲಸೌಕರ್ಯದ ಅಭಿವೃದ್ಧಿಗೆ 50 ಕೋಟಿ ಅನುದಾನ. ಪ್ರಸಕ್ತ ವರ್ಷ 9.74  ಲಕ್ಷ ಮನೆ ನಿರ್ಮಾಣಕ್ಕೆ ಕ್ರಮ, 10,194 ಕೋಟಿ ಅನುದಾನ. ರಾಜ್ಯದಲ್ಲಿ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರ ನಿರ್ಮಾಣಕ್ಕೆ ಒತ್ತು.

ಭದ್ರ ಮೇಲ್ದಂಡೆ ಯೋಜನೆಗೆ 27,474 ಕೋಟಿ ಪರಿಸ್ಕೃತ ಅಂದಾಜು ಮಾಡಲಾಗಿದೆ. ಮಹಾದಾಯಿ ನಾಲೆ ತಿರುವು ಯೋಜನೆಗೆ 1677 ಕೋಟಿ ಅನುದಾನ. ಉ.ಕರ್ನಾಟಕದ 6 ಲಕ್ಷ ಹೆಕ್ಷರ್​​ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆ. ಕೃಷ್ಣಾ ಜಲಭಾಗ್ಯ ನಿಗಮಕ್ಕೆ 5600 ಕೋಟಿ ಅನುದಾನ. ವಿಶ್ವಬ್ಯಾಂಕ್​​​ನ ನೆರವಿನಿಂದ 58 ಅಣೆಕಟ್ಟೆಗಳ ಪುನಶ್ಚೇತನಕ್ಕೆ 1500 ಕೋಟಿ ಅನುದಾನ. ಚಿಕ್ಕಬಳ್ಳಾಪುರ 234 ಕೆರೆಗಳಿಗೆ ನೀರುತುಂಬಿಸಲು 500 ಕೋಟಿ ಅಂದಾಜು ವೆಚ್ಚ. ಮುಂದಿನ 5 ವರ್ಷದಲ್ಲಿ 3986 ಕೋಟಿ ವೆಚ್ಚದಲ್ಲಿ 1348 ಕಿರು ಅಣೆಕಟ್ಟೆಗಳ ನಿರ್ಮಾಣ. 2021-22ನೇ ಸಾಲಿನಲ್ಲಿ 500 ಕೋಟಿ ಅನುದಾನ. ಕೃಷಿ ಮತ್ತು ಪೂರಕ ಚಟಿವಟಿಕೆಗಳ ವಲಯಕ್ಕೆ 31,028 ಕೋಟಿ ಅನುದಾನ.

ಪೆಟ್ರೋಲ್​​​, ಡೀಸೆಲ್ ಬೆಲೆ ​ಮೇಲೆ ಹೆಚ್ಚುವರಿ ತೆರಿಗೆ ವಿಧಿಸದ ರಾಜ್ಯ ಸರ್ಕಾರ. ಸ್ಮಾರ್ಟ್​​ಕ್ಲಾಸ್​ ನಿರ್ಮಾಣಕ್ಕೆ 50ಕೋಟಿ ಅನುದಾನ. ಆಯ್ದ 50 ಶಾಲೆಗಳಲ್ಲಿ ಸ್ಮಾರ್ಟ್​​ ಕ್ಲಾಸ್​​ರೂಮ್​​​​ ನಿರ್ಮಾಣ. ಸರ್ಕಾರಿ ಶಾಲೆಗಳಲ್ಲಿ ಪೀಠೋಪಕರಣಗಳಿಗೆ 50 ಕೋಟಿ. ಫ್ಲ್ಯಾಟ್​ಗಳ ಮೇಲಿನ ಮುದ್ರಾಂಕ ಶುಲ್ಕ 3ಕ್ಕೆ ಇಳಿಕೆ. ಫಸಲ್​​ ಭೀಮಾ ಯೋಜನೆಗೆ 900 ಕೋಟಿ ನಿಧಿ. ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮೀಸಲು. ಸರ್ಕಾರಿ ಮಹಿಳಾ ನೌಕರರಿಗೆ 6 ತಿಂಗಳು ಪ್ರಸೂತಿ ರಜೆ. ಮಹಿಳೆಯರ ಎದೆ ಹಾಲಿನ ಬ್ಯಾಂಕ್​​​ ಸ್ಥಾಪನೆಗೆ 2.5 ಕೋಟಿ ಅನುದಾನ ನೀಡಲಾಗಿದೆ.  ನಿರ್ಭಯ ಯೋಜನೆಯಡಿ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನ ಕೇಂದ್ರ ಆರಂಭ ಮಾಡಲಾಗುತ್ತದೆ.

ಈ ವವರ್ಷ ಬಜೆಟ್​ನಲ್ಲಿ ಅಬಕಾರಿ ಸುಂಕ ಹೆಚ್ಚಳ ಇಲ್ಲ. ಮದ್ಯ ಪ್ರಿಯರಿಗೆ ರಿಲೀಫ್​ ನೀಡಿದ ರಾಜ್ಯ ಸರ್ಕಾರ. ಕಟ್ಟಡ ಕಾರ್ಮಿಕರಿಗೆ 50 ಲಕ್ಷ ಆಹಾರ ಪೊಟ್ಟಣವನ್ನು ವಿತರಿಸಲಾಗುವುದು ಎಂದು ಹೇಳಿದೆ.

ಬಸವ ಕಲ್ಯಾಣ ಅಭಿವೃದ್ಧಿಗೆ 200 ಕೋಟಿ ಅನುದಾನ. ಆದಿ ಚುಂಚನಗಿರಿ ಕೇತ್ರಕ್ಕೆ 10 ಕೋಟಿ ಅನುದಾನ. ಅಯೋಧ್ಯೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ 5 ಕೋಟಿ ಅನುದಾನ. ರಾಜ್ಯದ ಕ್ರೀಡಾ ವಿಜ್ಞಾನ ಕ್ರೀಡಾಂಗಣಕ್ಕೆ 2 ಕೋಟಿ. ಜಕ್ಕೂರು ವಿಮಾನ ತರಬೇತಿ ಕೇಂದ್ರಕ್ಕೆ 2 ಕೋಟಿ ಅನುದಾನ. ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿಗೆ 500 ಕೋಟಿ ಅನುದಾನ.

2021-22ರ ಪ್ರಸಕ್ತ ಸಾಲಿನಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. 2021-22 ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು 71889 ಕೋಟಿ ರೂ. ತೆರಿಗೆಯನ್ನು ಸಂಗ್ರಹಿಸಿದೆ.  2021-22ನೇ ಸಾಲಿನಲ್ಲಿ 76473 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದೆ. 2020-21ನೇ ಸಾಲಿನಲ್ಲಿ 9014 ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹೊಂದಿದೆ. 2021-22ನೇ ಸಾಲಿನಲ್ಲಿ 12652 ಕೋಟಿ ಮುದ್ರಾಂಕ ಶುಲ್ಕ ಸಂಗ್ರಹಿಸುವ ಗುರಿ ಹೊಂದಿದೆ. 2020-21ರಲ್ಲಿ  ಅಬಕಾರಿ ಇಲಾಖೆಯಿಂದ 20900 ತೆರಿಗೆ ಸಂಗ್ರಹ ಗುರಿ ಹೊಂದಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 24580 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಿದೆ. ಸಾರಿಗೆ ಇಲಾಖೆಯಿಂದ 4294 ಕೋಟಿ ತೆರಿಗೆ ಸಂಗ್ರಹ. ಪ್ರಸಕ್ತ ವರ್ಷ ಸರ್ಕಾರಕ್ಕೆ ವಿತ್ತಿಯ ಕೊರತೆ 3.4ರಷ್ಟು ಇದೆ ಒಟ್ಟು 15134 ಕೋಟಿ ಕೊರತೆಯ ಬಜೆಟ್​ ನ್ನು ಸಿಎಂ ಬಿಎಸ್ ಯಡಿಯೂರಪ್ಪ  ಮಂಡಿಸಿದ್ದಾರೆ.  

 

RELATED ARTICLES

Related Articles

TRENDING ARTICLES