ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ 12.05 ನಿಮಿಷಕ್ಕೆ ಆಯವ್ಯಯ ಮಂಡನೆ ಶುರುವಾಗಲಿದೆ. ಹಾಗಾಗಿ ಎಲ್ಲರ ಚಿತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರತ್ತ. 8 ನೇ ಬಜೆಟ್ ಮಂಡಿಸಲು ಬಿಎಸ್ ವೈ ಸಜ್ಜಾಗಿದ್ದಾರೆ. ಬಜೆಟ್ ಮಂಡನೆಯು ಜನರಲಿ ಭಾರಿ ಕುತೂಹಲ ಕೆರಳಿಸಿದೆ.
ಕೊರೋನಾ ಹಿನ್ನಲೆಯಲ್ಲಿ ರಾಜ್ಯ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿದೆ. ರಾಜ್ಯ ಸರ್ಕಾರದ ಸಾಲದ ಪ್ರಮಾಣ ಏರು ಗತಿಯಲ್ಲಿ ಸಾಗುತ್ತಿದೆ. ಬೆಲೆ ಏರಿಕೆಯು ಜನಸಾಮಾನ್ಯರನ್ನು ನಲುಗಿಸಿದೆ. ಜನಸ್ನೇಹಿ ಬಜೆಟ್ ಮಂಡನೆಯು ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಒಂದು ಸವಾಲಾಗಿ ಪರಿಣಮಿಸಿದೆ.
ಬಜೆಟ್ ಮಂಡನೆಯಲ್ಲಿ ಎಲ್ಲಾ ವರ್ಗಗಳಿಗೂ ಆಧ್ಯತೆ ನೀಡಬೇಕಾದ ಅನಿವಾರ್ಯತೆ ಉಂಟಾಗಿದೆ. ರಾಜ್ಯದ ಆದಾಯದಲ್ಲಿ ಕೊರತೆ ಇದ್ದರೂ ಜನರ ಮೇಲೆ ಹೊರೆ ಹೇರುವಂತಿಲ್ಲ. ಬಜೆಟ್ ಮಂಡನೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಗ್ಗಜಗ್ಗಾಟ ನಡೆಸಬೇಕಾಗಿದೆ.
ಆರ್ಥಿಕ ಶಿಸ್ತು ಮೀರಿ ಸಾಲ ಮಾಡಲು ಕೇಂದ್ರ ಸರ್ಕಾರ ಅನುಮತಿಗೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಉತ್ತಮ ಬಜೆಟ್ ಮಂಡನೆ ಮಾಡುವ ನಿರೀಕ್ಷೆಯಲ್ಲಿ ಇದ್ದಾರೆ. ಬಜೆಟ್ ಹಿನ್ನಲೆಯಲ್ಲಿ ರಾಜ್ಯದ ಮೇಲೆ ಮತ್ತಷ್ಟು ಸಾಲದ ಹೊರೆ ಬಿಳಲಿದೆ. ರಾಜ್ಯದಿಂದ ಕಳೆದ ಫೆಬ್ರವರಿ ಅಂತ್ಯಕ್ಕೆ 60 ಸಾವಿರ ಕೋಟಿ ರೂಪಾಯಿ ಸಾಲ ಹೊರೆ ಹೊತ್ತಿದೆ. ವರ್ಷಾಂತ್ಯಕ್ಕೆ ರಾಜ್ಯದ ಸಾಲ 4.19 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗುವ ಸಾಧ್ಯತೆ. ಸಾಲದ ಶೂಲಕ್ಕೆ ಸಿಲುಕುವ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರ ಇದೆ.