Thursday, January 23, 2025

ಪೋಲಿ-ಪುಂಡರು ದೇಣಿಗೆ ಸಂಗ್ರಹ: ಹೆಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ಪೋಲಿ-ಪುಂಡರು ದೇಣಿಗೆ ಸಂಗ್ರಹ ಮಾಡ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನ ಹೆಸರಲ್ಲಿ ರಾಜಕೀಯ ಮಾಡಬಾರದು. ರಾಮನ ಹೆಸರಿನಲ್ಲಿ ಹಣವನ್ನ ಕೊಳ್ಳೆ ಹೊಡೆಯುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ವಿಹೆಚ್‌ಪಿಯವರು ಹಣ ಸಂಗ್ರಹಣೆ ಮಾಡ್ತಿದ್ದಾರೆ. ರಾಮ ಮಂದಿರ ಕಟ್ಟುವುದಕ್ಕೆ ನಮ್ಮ ವಿರೋಧ ಇಲ್ಲ. ಧರ್ಮದ ಹೆಸರಲ್ಲಿ ನಾನು ಭ್ರಷ್ಟಾಚಾರ ಮಾಡಲ್ಲ. ರಾಜಕೀಯ ಜೀವನಕ್ಕೋಸ್ಕರ ರಾಮನ ಹೆಸರು ಬಳಸಿಕೊಳ್ಳುತ್ತಿದ್ದೀರಾ? ವಿಹೆಚ್‌ಪಿಯವರಿಗೆ ಯಾರು ಅಧಿಕಾರ ಕೊಟ್ಟಿದ್ದು, ದೇಣಿಗೆ ಸಂಗ್ರಹಕ್ಕೆ ಲೆಕ್ಕ ಕೊಡೋರ್ಯಾರು..? ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನಿಡಿದ್ದಾರೆ.

RELATED ARTICLES

Related Articles

TRENDING ARTICLES