Monday, December 23, 2024

‘ ಎಂಎಲ್ ಸಿಗಳ ಸಭೆ ಕರೆದ ಬಿಎಸ್ ವೈ’

ಬೆಂಗಳೂರು: ನಾಳೆ ವಿಧಾನ ಪರಿಷತ್ ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಅವರು ಬಿಜೆಪಿ ಎಂಎಲ್ ಸಿಗಳ ಸಭೆ ಕರೆದಿದ್ದಾರೆ.

ಇಂದು ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಬಿಜೆಪಿ ಎಂಎಲ್ ಸಿಗಳ ಸಭೆ ನಡೆಯಲಿದೆ. ಪರಿಷತ್ ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಸಭೆಯಲ್ಲಿ ಬಸವರಾಜ್ ಹೊರಟ್ಟಿಗೆ ಬೆಂಬಲ ಕೊಡುವ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದಾರೆ. ಉಪಸಭಾಪತಿ ಸ್ಥಾನ ಬಿಜೆಪಿಗೆ, ಸಭಾಪತಿಸ್ಥಾನ ಜೆಡಿಎಸ್ ಗೆಂದು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಬಿಜೆಪಿಯಲ್ಲಿ ಪ್ರಾಣೇಶ್ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಗೆ ಸಂಖ್ಯಾಬಲದ ಕೊರತೆ ಇದ್ದರೂ ಕಾಂಗ್ರೆಸ್ ಅಖಾಡಕ್ಕೆ ಇಳಿದಿದೆ. ನಸೀರ್ ಅಹ್ಮದ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಲಿದ್ದಾರೆ.    

RELATED ARTICLES

Related Articles

TRENDING ARTICLES