ಬೆಂಗಳೂರು: ಬಿಬಿಎಂಪಿ ಚುನಾವಣೆಯನ್ನು ಆರು ತಿಂಗಳು ಮುಂದೂಡಿಕೆ ಮಾಡಲಾಗಿದೆ ಎಂದು ಸರ್ಕಾರದಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.
ಬಿಬಿಎಂ ವಾರ್ಡ್ ಗಳಲ್ಲಿ 243 ವಾರ್ಡ್ ಗಳ ಸಂಖ್ಯೆ ಹೆಚ್ಚಾಗಿದೆ. 6 ತಿಂಗಳ ಒಳಗೆ ವಾರ್ಡ್ ಗಳ ಪುನರ್ ವಿಂಗಡಣೆ ಮಾಡಲು ಸೂಚನೆ ನೀಡಿದೆ. ಬಿಬಿಎಂಪಿ ಗಡಿ ರೇಖೆಯ ಹೊರಗೆ 1ಕಿ.ಮೀ. ಸೇರಿಸಲು ಆದೇಶವನ್ನು ಹೊರಡಿಸಲಾಗಿದೆ. ಗ್ರಾಮ ಪಂಚಾಯತ ಕೆಲ ಹಳ್ಳಿಗಳನ್ನು ಸೇರಿಸಲು ಶಾಸಕರಿಂದ ಪ್ರಸ್ತಾವನೆ ಪಡೆದು, ಈ ಬಗ್ಗೆ ಧೃಡಿಕರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ನೀಡಲಾಗುತ್ತದೆ.
1 ವಾರ್ಡ್ ಗೆ ಎಷ್ಟು ಜನ ಬರುತ್ತಾರೆ. ಕೌನ್ಸಿಲರ್ ಗಳ ಹೆಚ್ಚಳದಿಂದ ಬಿಬಿಎಂಪಿ ಜನಸಂಖ್ಯೆ ಜಾಸ್ತಿಯಾಗಿದೆ. ಹೊಸ ಏರಿಯಾಗಳನ್ನು ರಾಜ್ಯ ಸರ್ಕಾರ ಫೈನಲ್ ಮಾಡುತ್ತೆ. ಫೈನಲ್ ನೋಟಿಫಿಕೇಶನ್ ಹೊರಡಿಸಿ ನಂತರ ಚುನಾವಣೆ ಮಾಡಲಾಗುತ್ತೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ ಹೇಳಿದ್ದಾರೆ.
ಈ ಹಿಂದೆ ಕೂಡ ಕೆಲ ಹಳ್ಳಿಗಳನ್ನು ಸೇರಿಸಿಕೊಂಡಿದ್ದೆವು. ಆದರೆ ಈಗ ಹಳ್ಳಿಗಳಾಗಿ ಇಲ್ಲ. ಬದಲಾವಣೆ ಆಗಿವೆ. ಜಾಸ್ತಿ ಅಭಿವೃದ್ಧಿ ಆಗಿರುವ ಪ್ರದೇಶಗಳನ್ನು ಸೇರಿಸಿಕೊಳ್ಳುತ್ತೇವೆ. ಮುಂದಿನ ವಾರದಲ್ಲಿ ಕಮೀಟಿ ಮೀಟಿಂಗ್ ಮಾಡುತ್ತೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.