Friday, November 22, 2024

‘ನಾನೇ ಸಭಾಪತಿ ಎಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ’

ಹುಬ್ಬಳ್ಳಿ: ಜೆಡಿಎಸ್ ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿಗೆ ಸ್ಪರ್ದೆ ಮಾಡಿದ್ರೆ ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್  ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಲ್ಲಿ ಒಮ್ಮತದ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಲ್ಲಿ ನಾನೇ ಸಭಾಪತಿ ಅಭ್ಯರ್ಥಿ. ಅಲ್ಲದೇ ಬಿಜೆಪಿ ಉಪಸಭಾಪತಿಗೆ ಸ್ಪರ್ಧಿಸಿದರೇ ನಾನು ಸಭಾಪತಿ ಆಗೋದು ನಿಶ್ಚಿತ ಎಂದರು.

ಜನೇವರಿ 18 ರಂದು ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಏಳು ವಿಭಾಗ ರಚಿಸಿ ಸಮಿತಿ ರಚಿಸಲಾಗಿದೆ. ಜೆಡಿಎಸ್ ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದ್ದು, ಇಂದು ಬೆಳಗಾವಿ ವಿಭಾಗದ ಸಭೆ ನಡೆಸಲಾಗುತ್ತಿದೆ. ನಮ್ಮ ವಿಭಾಗದ ಜವಾಬ್ದಾರಿ ನಿಭಾಯಿಸಲು ನನ್ನನ್ನು ಸಂಚಾಲಕನಾಗಿ ನೇಮಿಸಿದ್ದಾರೆ. ಸಾಕಷ್ಟು ಹೊಡೆತಗಳನ್ನ ತಿಂದು ಪಕ್ಷ ಕ್ಷೀಣವಾಗಿದೆ. ಹೀಗಾಗಿ ಪಕ್ಷವನ್ನ ಸಂಘಟನೆ ಮಾಡಿ ಗಟ್ಟಿಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಪಕ್ಷ ಸಂಘಟನೆ ಹಿನ್ನೆಲೆ ಇದೇ 31 ರಂದು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರವಾಸ ಮಾಡಲಿದ್ದಾರೆ. ಈ ಬಾರಿ ಪಕ್ಷದಲ್ಲಿ ಪ್ರತಿಶತ 45 ಯುವಜನತೆಗೆ ಆದ್ಯತೆ ನೀಡಲಾಗುತ್ತಿದೆ. ಪಕ್ಷ ಬಲಿಷ್ಟವಾಗಿ ಸಂಘಟಿಸಲು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ತಾ. ಪಂ, ಜಿ.ಪಂ.‌ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.

ಈ ಹಿಂದೆ ಆದಂತಹ ತಪ್ಪುಗಳನ್ನ ತಿದ್ದಿಕೊಂಡು ಮುನ್ನಡೆಯಲಿದ್ದೇವೆ ಎಂದ ಅವರು, ನಾಳೆ ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಜೆಡಿಎಸ್ ನಿಂದ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ರೈತರಿಗೆ ನಮ್ಮ ಬೆಂಬಲವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES