Monday, December 23, 2024

ಸರ್ಕಾರ ಸೇಫ್ ಆದ್ಮೇಲೆ ಮೂಲೆ ಗುಂಪು ಮಾಡುತ್ತಿದ್ದಾರೆ: ಗೋಪಾಲಯ್ಯ

ಬೆಂಗಳೂರು: ಖಾತೆ ಬದಲಾದ ಹಿನ್ನಲೆಯಲ್ಲಿ ಸಚಿವ ಗೋಪಾಲಯ್ಯ ಸಚಿವ ಸುಧಾಕರ್ ಬಳಿ ಕಣ್ಣೀರು ಹಾಕಿದ್ದಾರೆ.

ಲಾಕ್ ಡೌನ್ ವೇಳೆ ಹಗಲು-ರಾತ್ರಿ ಕೆಲಸ ಮಾಡಿದ್ದೇನೆ. ಇಲಾಖೆಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೂ ಕಡಿವಾಣ ಹಾಕಿದ್ದೇನೆ. ರಾಜ್ಯಾದ್ಯಂತ ಒಳ್ಳೆಯ ಜನಾಭಿಪ್ರಾಯ ಕೂಡ ಬಂದಿತ್ತು. ಆಗ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನನ್ನಇಷ್ಟದ ಖಾತೆ ಆಗಿತ್ತು. ಆದರೆ ನನ್ನ ಇಷ್ಟದ ಇಲಾಖೆಯನ್ನೇ ತೆಗೆದಿದ್ದಾರೆ. ಸರ್ಕಾರ ರಚನೆ ಆಗೋವರೆಗೂ ಸಿಎಂ ಯಡಿಯೂರಪ್ಪ ಚೆನ್ನಾಗಿಯೇ ಇದ್ದರು. ಆದರೆ ಸರ್ಕಾರ ಸೇಫ್ ಆದ್ಮೇಲೆ ನಮ್ಮನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ಸಚಿವ ಸುಧಾಕರ್ ಮುಂದೆ ಸಚಿವ ಗೋಪಾಲಯ್ಯ ಕಣ್ಣೀರು ಹಾಕಿದ್ದಾರೆ.  

RELATED ARTICLES

Related Articles

TRENDING ARTICLES