Monday, December 23, 2024

‘ಅತೃಪ್ತರ ಮನವೊಲಿಕೆಗೆ ಸಿಎಂ ಯತ್ನ’

ಬೆಂಗಳೂರು: ನೂತನ ಖಾತೆ ಸಚಿವ ಖಾತೆ ಹಂಚಿಕೆ ಹಿನ್ನಲೆಯಲ್ಲಿ ಖಾತೆ ಬದಲಾವಣೆಯಿಂದ ಕೆಲ ಸಚಿವರಲ್ಲಿ ಅತೃಪ್ತಿ ಉಂಟಾಗಿದೆ.

ಸಿಎಂ ಯಡಿಯೂರಪ್ಪ ತುಮಕೂರಿನಿಂದ ಬರುತ್ತಿದ್ದಂತೆ ಅಸಮಾಧಾನಿತರಿಗೆ ಮನೆಗೆ ಕರೆಸಿಕೊಂಡು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಜೊತೆ ಎಂಟಿಬಿ ನಾಗರಾಜ್, ಗೋಪಾಲಯ್ಯ ಚರ್ಚೆ ಕಾವೇರಿ ನಿವಾಸದಲ್ಲಿ ಖಾತೆ ಅಸಮಾಧಾನ ಬಗ್ಗೆ ಚರ್ಚೆ ಮಾಡಲಿದ್ದಾರೆ. ಇದಕ್ಕೂ ಮೊದಲು ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಶೋಕ್ ಮನೆಯಲ್ಲಿ ಸಮಾಲೋಚನೆ ನಡೆಸಿ ಅಬಕಾರಿ ಇಲಾಖೆ ಬೇಡ ಎಂದು ಆರ್, ಅಶೋಕ್ ಗೆ ಎಂಟಿಬಿ ನಾಗರಾಜ್ ಮನವಿ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಅಸಮಾಧಾನ ಸಚಿವರಿಗೆ ಸಮಾಧಾನ ಮಾಡೋ ಹೊಣೆಯನ್ನು ಸಚಿವರಾದ ಬೊಮ್ಮಾಯಿ, ಅಶೋಕ್ ಗೆ ವಹಿಸಿದ್ದಾರೆ.  

RELATED ARTICLES

Related Articles

TRENDING ARTICLES