Tuesday, November 26, 2024

ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋವು ತಂದಿದೆ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಇತ್ತೀಚೆಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ, ಶಾಸಕರ ವರ್ತನೆ ನನಗೆ ಬೇಸರ ತರಿಸಿದೆ. ಇದು ಬಿಜೆಪಿ ಪಕ್ಷನಾ ಎಂಬ ಅನುಮಾನ ಹುಟ್ಟುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಪಕ್ಷದ ಹಿತೈಷಿಗಳಿಗೆ ಹಿರಿಯರಿಗೆ ಈ ಬೆಳವಣಿಗೆ ಸಮಾಧಾನ ಇಲ್ಲದಂತಾಗಿದೆ. ಕೇವಲ ಮಂತ್ರಿಯಾಗುವುದಸ್ಕೋರ ಮಾತ್ರ ರಾಜಕಾರಣಿಯಾಗುವುದು ಸರಿಯಲ್ಲ. ರಾಜಕೀಯ ಕ್ಷೇತ್ರದಲ್ಲಿ ಕೇವಲ ಮಂತ್ರಿಯಾಗಲು ಕೆಲಸ ಮಾಡುತ್ತಿರುವುದು ನೋಡಿ ಬಹಳ ನೋವಾಗುತ್ತಿದೆ. ಈ ರೀತಿ ಸಮಸ್ಯೆಯನ್ನ ಯಾರು ಉಂಟು ಮಾಡುತ್ತಿದ್ದಾರೆ ಅವರ ಬಗ್ಗೆ ನಾಳೆ ದಿನ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳಬಹುದು. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಪಕ್ಷದ ಹಿರಿಯರು ಗಮನಿಸಬೇಕೆಂದು ಮನವಿ ಮಾಡುತ್ತೆನೆ ಎಂದಿದ್ದಾರೆ.

ನಮ್ಮ ಪಕ್ಷದವರ ಮೇಲೆಯೇ, ಶಿಸ್ತು ಕ್ರಮ ಜರುಗಿಸುವುದು ಕೂಡ ಸರಿಯಾಗುವುದಿಲ್ಲ.  ಸಂಪುಟ ವಿಸ್ತರಣೆ ಸಂಬಂಧ ಅಸಮಾಧಾನ ಇರುವುದು ನಿಜ. ಆದರೆ ಅದನ್ನು ಎಲ್ಲಿ ಸರಿಪಡಿಸಿಕೊಳ್ಳಬೇಕೋ ಅಲ್ಲಿ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡಿದರೆ ಬಗೆಹರಿಯುತ್ತದೆಯಾ ಎಂದು ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡೋದು, ಅವರ ಕುಟುಂಬದವರ ಮೇಲೆ ಆರೋಪ ಮಾಡೋದು ಸರಿಯಲ್ಲ. ಈ ಎಲ್ಲಾ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ. ಯಾರು ಯಾರು ಈ ದಿಕ್ಕಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೋ ಅವರೆಲ್ಲರೂ ತಕ್ಷಣವೇ ಇವೆಲ್ಲವನ್ನೂ ನಿಲ್ಲಿಸಬೇಕು. ಯಾರು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದಿದ್ದಾರೋ ಅವರು ಬಂದಿರಲಿಲ್ಲ ಎಂದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ. 17 ಜನ ಬಾರದೇ ಇದ್ದಿದ್ದರೆ, ವಿರೋಧ ಪಕ್ಷದಲ್ಲಿ ಕೂರಬೇಕಾಗಿತ್ತು. ಅವರು ಬಾರದೇ ಹೋಗಿದ್ದರೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಆಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

ಇಷ್ಟಕ್ಕೆ ನಮ್ಮ ರಾಜಕೀಯ ಜೀವನ ಮುಗಿದು ಹೋಗಿದಿಯಾ ಅಂತಾ ಈಶ್ವರಪ್ಪ ಪ್ರಶ್ನಿಸಿದ್ದಾರೆ. ಈ ಬೆಳವಣಿಗೆಗಳು ನಮ್ಮ ಪಕ್ಷಕ್ಕೆ ಶೋಭೆ ತರುವಂತಹದ್ದಲ್ಲ. ಯಾವುದೇ ಆಸೆ ಪಡದ ಲಕ್ಷಾಂತರ ಕಾರ್ಯಕರ್ತರಿಂದ ಬಿಜೆಪಿ ಇಂದು ಅಧಿಕಾರಕ್ಕೆ ಬಂದಿದೆ.  ಜೈಲಿಗೆ ಹೋಗಿ ಬಂದಿರುವ ಕಾರ್ಯಕರ್ತರಿಂದ ಪಕ್ಷ ಈ ಮಟ್ಟಕ್ಕೆ ಬೆಳೆದಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಬಿಜೆಪಿ ಪದ್ಧತಿ ಮೀರಿ ಹೋದವರು ಮುಂದಿನ ದಿನಗಳಲ್ಲಿ ಅನುಭವಿಸುತ್ತಾರೆ. ಇದರಲ್ಲಿ ಅನುಮಾವೇ ಇಲ್ಲ.  ನಾನು ಯತ್ನಾಳ್ ಸೇರಿದಂತೆ, ಯಾರ ವಿರುದ್ಧವೂ ವ್ಯಯಕ್ತಿಕವಾಗಿ ಹೇಳೋದಿಲ್ಲ. ಪ್ರತಿಯೊಬ್ಬರೂ, ಪಕ್ಷದ ಚೌಕಟ್ಟಿನಲ್ಲಿಯೇ ಇರಬೇಕೆಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ವಿಪಕ್ಷ ಇಲ್ಲವೇ ಇಲ್ಲ ಎಂದು ಕೂಡ ಈಶ್ವರಪ್ಪ ಹೇಳಿದ್ದಾರೆ.  ಸಿದ್ಧರಾಮಯ್ಯ ಮತ್ತೊ ಡಿ.ಕೆ. ಶಿವಕುಮಾರ್ ಮೊದಲು ಅವರ ಪಕ್ಷದ ಗೊಂದಲ ಸರಿಪಡಿಸಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ ಎಂದರು.

RELATED ARTICLES

Related Articles

TRENDING ARTICLES