ಚಿತ್ರದುರ್ಗ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗುತ್ತಲೆ ಇದೆ. ಹೊರಗಿನವರು ಬಂದು ಮಂತ್ರಿಯಾಗುತ್ತಾರೆ. ಇದರಿಂದ ಜಿಲ್ಲೆಯ ಅಭಿವೃದ್ದಿಗೆ ಕುಂಠಿತವಾಗುತ್ತದೆ. ಅಪ್ಪರ್ ಭದ್ರಾ ಹಾಗೂ ರೈಲ್ವೇ ಮಾರ್ಗ ಇನ್ನಿತರೇ ಕಾಮಗಾರಿಗಳು ವಿಳಂಬವಾಗುತ್ತಿವೆ. ಇದರಿಂದ ಸ್ಥಳಿಯರಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಐವರು ಶಾಸಕರು ಆಯ್ಕೆಯಾಗಿದ್ದೇವೆ. ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಕ್ಷದಲ್ಲಿ ಹಿರಿಯರಿಗೆ ಗೌರವ ಸಿಗುತ್ತದೆ ಅಂದುಕೊಂಡಿದ್ದೆನೆ. ಹೀಗಾಗಿಯೇ ನಾನು ಹೈ ಕಮಾಂಡ್ ಭೇಟಿ ಮಾಡಿಲ್ಲ. ನನ್ನನ್ನು ಇದುವರೆಗೂ ಯಾರೂ ಸಂಪರ್ಕ ಮಾಡಿಲ್ಲ. ಮುಖ್ಯ ಮಂತ್ರಿಗಳು ನನಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ನಂಬಿಕೆ ನನಗಿದೆ. ನಾನು ಯಾವುದೇ ಲಾಭಿ ಮಾಡಿಲ್ಲ. ಅಂತ ಶಾಸಕರು ಬೇಸರವನ್ನ ವ್ಯಕ್ತ ಪಡೆದಿದ್ದಾರೆ