ಶಿವಮೊಗ್ಗ: ಈ ಹಿಂದೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಆಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಆಗೇನೂ ಇವರು ಮಂಡಕ್ಕಿ ತಿನ್ನುತ್ತಾ ಕುಳಿತಿದ್ರಾ ಅಂತಾ ಮಾಜಿ ಸಿ.ಎಂ. ಸಿದ್ಧರಾಮಯ್ಯನವರಿಗೆ, ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಇಂದು ಮಾದ್ಯಮಗಳ ಮುಂದೆ, ಸಿದ್ಧರಾಮಯ್ಯನವರ ಎಸ್.ಟಿ. ಮೀಸಲಾತಿ ಹೋರಾಟದ ಬಗ್ಗೆ ಹೇಳಿಕೆಗೆ ಗರಂ ಆದ ಈಶ್ವರಪ್ಪ, ಟೀಕೆ ಮಾಡೋದು ಬಹಳ ಸುಲಭ. ಟೀಕೆ ಮಾಡುತ್ತಾ ಕುಳಿತು ಕೊಳ್ಳುವವರಿಗೆಲ್ಲಾ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಆದರೆ, ಸಿದ್ಧರಾಮಯ್ಯನವರು ಟೀಕೆ ಮಾಡಿದಕ್ಕೆ ನಾನು ಉತ್ತರ ನೀಡುತ್ತಿದ್ದೇನೆ.
ಈ ಹಿಂದೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಇವರದೇ ಸರ್ಕಾರ ಇತ್ತು. ಆಗ ಇವರೇ ಮುಖ್ಯಮಂತ್ರಿಯಾಗಿದ್ದರು. ಆಗ ಯಾಕೆ ಎಸ್.ಟಿ. ಮೀಸಲಾತಿ ಮಾಡಿಲ್ಲ ಅಂತಾ ಪ್ರಶ್ನಿಸಿದ್ದಾರೆ. ನಾವೇನು ಸುಮ್ಮನೆ ಕೂತಿಲ್ಲ. ನಮ್ಮ ಸರ್ಕಾರವಿದೆ. ನಾವು ಈ ಬಗ್ಗೆ ಹೋರಾಟ, ಪಾದಯಾತ್ರೆ ಮಾಡುತ್ತೇವೆ. ಈ ಮೂಲಕ ಕೇಂದ್ರದ ನಾಯಕರ ಗಮನ ಸೆಳೆಯುತ್ತೇವೆ. ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರಿಗೆ ಈ ಬಗ್ಗೆ ಗಮನಕ್ಕೆ ತರುತ್ತೇನೆ. ಕುಲಶಾಸ್ತ್ರ ಅಧ್ಯಯನದ ವರದಿ ಬಂದ ಬಳಿಕ ಈ ಬಗ್ಗೆ ಸಿ.ಎಂ. ಯಡಿಯೂರಪ್ಪ ಅವರ ಬಳಿ ಚರ್ಚಿಸುತ್ತೇನೆ. ಈ ಮೂಲಕ, ಕುರುಬರಿಗೆ ಎಸ್.ಟಿ. ವಿಚಾರದಲ್ಲಿ ಅನುಕೂಲ ಮಾಡಿಕೊಡಬೇಕು, ಮಾಡಿಕೊಡುತ್ತೇವೆ ಅಂತಾ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.