ಶಿವಮೊಗ್ಗ : ಈಗಲೂ ಸಿದ್ಧರಾಮಯ್ಯನವರು, ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಆದರೆ, ಈ ಜನ್ಮದಲ್ಲಿ ಅವರು ಮತ್ತು ಡಿ.ಕೆ.ಶಿ. ಇಬ್ಬರೂ ಮುಖ್ಯಮಂತ್ರಿ ಆಗಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಮತ್ತೊಮ್ಮೆ ಬರಲ್ಲ ಅಂತಾ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯನವರು, ಈಗಾಗಲೇ, ಅವರಿಗವರೇ, ನಾನೇ ಮುಖ್ಯಮಂತ್ರಿ ಅಂತಾ ಘೋಷಣೆ ಮಾಡಿಕೊಂಡು ಬಿಟ್ಟಿದ್ದಾರೆ. ನಿನ್ನೆ ಅವರು ಬಾದಾಮಿಯಲ್ಲಿ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇನೆ. ಜನರು ಇವರನ್ನು ಎಲ್ಲಾ ಚುನಾವಣೆಗಳಲ್ಲಿಯೂ ಸೋಲಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದಾರೆ. ನಂತರದ ಉಪಚುನಾವಣೆಗಳಲ್ಲಿ ಸೋಲಿಸಿದ್ದಾರೆ. ಈಗ ನಡೆದ ಗ್ರಾ.ಪಂ. ಚುನಾವಣೆಯಲ್ಲಿಯೂ ಜನರು ಬಿಜೆಪಿಗೆ ಆಶೀರ್ವದಿಸಿ ಕಾಂಗ್ರೆಸ್ ಗೆ ಸೋಲಿಸಿದ್ದಾರೆ.
ಅಲ್ಲದೇ, 28 ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ನೀಡಿದ್ದಾರೆ. ಆದರೂ ಈ ಕಾಂಗ್ರೆಸ್ ನವರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಸಿದ್ಧರಾಮಯ್ಯನವರು ಈಗಲೂ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಈ ಹಿಂದೆ ಸರ್ವಾಧಿಕಾರಿ ಧೋರಣೆ ತೋರಿ, ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸೋಲು ಕಂಡಿದ್ದರು.
ಇದೀಗ ಮತ್ತೆ, ಸಿದ್ಧರಾಮಯ್ಯನವರು ಈಗಾಗಲೇ ಅವರಿಗವರೇ, ನಾನೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿಕೊಂಡು ಬಿಟ್ಟಿದ್ದಾರೆ. ಕಾಂಗ್ರೆಸ್ ನ ಕೇಂದ್ರ ನಾಯಕರು ಇವರಿಗೆ ಮುಖ್ಯಮಂತ್ರಿ ಎಂದು ಹೇಳಿದ್ದಾರಾ, ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕಾಂಗ ಸಭೆಯಲ್ಲಿ ತೀರ್ಮಾನ ಮಾಡಿದ್ದಾರಾ, ಕಾಂಗ್ರೆಸ್ ಪಕ್ಷದಲ್ಲಿ ಹೇಳೋರು ಕೇಳೋರು ಇಲ್ವಾ ಎಂದು ಈಶ್ವರಪ್ಪ ಪ್ರಶ್ನೇ ಮಾಡಿದ್ದಾರೆ. ಇವೆಲ್ಲಾ ಏನೂ ಇಲ್ಲದೇ, ಸಿದ್ಧರಾಮಯ್ಯ ಸ್ವಯಂ ಘೋಷಿತ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಹಗಲು ಕನಸು ಬೀಳುತ್ತಿದೆ. ರಾತ್ರಿ ಕೂಡ ಕನಸು ಬೀಳುತ್ತಿದೆ. ಕನಸು ಬೀಳುತ್ತಿರುವುದಕ್ಕೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿದ್ದಾರೆ ಅಂತಾ ಸಿದ್ಧರಾಮಯ್ಯ ನಿನ್ನೆ ಹೇಳಿಕೆ ವಿರುದ್ಧ ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದಾರೆ.