ಮೈಸೂರು: ಮಾಜಿ ಸಚಿವ ಯು.ಟಿ,ಖಾದರ್ ಹತ್ಯೆಗೆ ಸಂಚು ಹಿನ್ನಲೆಯಲ್ಲಿ, ರಾಜಕಾರಣಿಗಳ ಮೇಲಿನ ಹಲ್ಲೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ನನ್ನ ಹತ್ಯೆಗೆ ಯತ್ನಿಸಿದವರು ಯಾರು, ಉದ್ದೇಶ ಏನು ಎಂದು ಇನ್ನೂ ತಿಳಿದಿಲ್ಲ. ಘಟನೆ ನಡೆದು ಒಂದು ವರ್ಷ ಎರಡು ತಿಂಗಳಾದರೂ ಇನ್ನೂ ಕಾರಣ ಗೊತ್ತಾಗಿಲ್ಲ. ಇಂತಹ ಕೇಸ್ ಗಳಲ್ಲಿ ಆರೋಪಿಗಳಿಗೆ ಜಾಮೀನು ಸಿಗುತ್ತೆ ಅಂದರೆ ಎನು. ಜಾಮೀನು ಸಿಗುತ್ತೆ ಅಂದರೆ ಪೊಲೀಸರು ತನಿಖೆ ಹೇಗೆ ನಡೆಸುತ್ತಾರೆ ಎಂದರು.
ಸರ್ಕಾರ ಗನ್ ಮ್ಯಾನ್, ಪೊಲೀಸ್ ಭಿಗಿ ಭದ್ರತೆ ಕೊಟ್ಟರೆ ಸಾಲದು. ಎಲ್ಲ ಕಡೆ ಗನ್ ಮ್ಯಾನ್ ಗಳನ್ನು ಇಟ್ಟುಕೊಂಡು ಓಡಾಡಲು ಆಗುವುದಿಲ್ಲ. ಗಣ್ಯರ ಮೇಲಿನ ಹಲ್ಲೆ, ಹತ್ಯೆ ನಡೆಯುವ ಸಂಬಂಧ ಎಸ್ ಐಟಿ ರಚಿಸಬೇಕು ಎಂದು ಮೈಸೂರಿನಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ.