ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನಂತರ ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜ್ಯದಲ್ಲಿ ಎರಡುವರೇ ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ಯಾರು ಎಷ್ಟೇ ಮಾತಾಡಿದರೂ ಸುಮ್ಮನಿದ್ದ ಬಿಎಸ್ ಯಡಿಯೂರಪ್ಪ ಅವರು ಈಗ ನಾಯಕತ್ವ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಇನ್ನೂ ಎರಡು ವರ್ಷ ನಾನೇ ಸಿಎಂ ಆಗಿ ಇರುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಡಿಯೂರಪ್ಪ ತಮಗೆ ತಾವೇ ಉತ್ತಮ ಆಡಳಿತ ಮಾಡುತ್ತಿದ್ದೇನೆ ಅಂತಾ ಸರ್ಟಿಫಿಕೇಟ್ ಕೊಟ್ಟುಕೊಳ್ತಾ ಇದ್ದಾರೆ. ಅಲ್ಲದೇ ನಾನೇ ಎರಡುವರೇ ವರ್ಷ ಸಿಎಂ ಆಗಿ ಅಧಿಕಾರದಲ್ಲಿರುತ್ತೇನೆ ಎಂದು ಹೇಳುವ ಅಗತ್ಯವೇನಿದೆ. ಅವರ ಅಧಿಕಾರದ ಬಗ್ಗೆ ನಾವು ಪ್ರಶ್ನಿಸಿದ್ವಾ? ಹಾಗಿದ್ದರೂ ಈ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯ ಏನಿತ್ತು ಅಂತಾ ಅವರು ಬಹಿರಂಗ ಪಡಿಸಬೇಕು ಅಂತಾ ಒತ್ತಾಯಿಸಿದ್ದಾರೆ.
ಇನ್ನೂ, ಬಿಜೆಪಿ ಶಾಸಕರೇ ನಾಯಕತ್ವದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುವ ಸ್ಥಿತಿ ಇಂದು ಎದುರಾಗಿದೆ. ಇದರಿಂದ ಎಲ್ಲೋ ಏನೋ ಯಡವಟ್ಟಾಗಿದೆ ಎಂಬ ಪ್ರಶ್ನೆಗಳು ಉದ್ಬವಿಸುತ್ತದೆ. ಸಿಎಂ ಖರ್ಚಿಗೆ ಅಪಾಯ ಎದುರಾಗಿದೆ ಎಂಬ ಅನುಮಾನ ಮೂಡುತ್ತದೆ. ಇವರ ಅಧಿಕಾರದ ದಾಹಕ್ಕೆ ಮತ್ತು ಸಚಿವರ ಆಂತರಿಕ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಕೊರೋನಾದಲ್ಲಿ ಜನರು ಬದಕು ದುಸ್ತರವಾಗಿತ್ತು. ಈಗ ಬ್ರಿಟನ್ ಕೊರೋನಾ ಬರಲು ಬಿಟ್ಟು, ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ಆಡಳಿತದ ವೈಖರಿ ಅಂತಾ ಹರಿಯಾಯ್ದಿದ್ದಾರೆ. ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಎಸ್‌ವೈ ವಿಭಾಗವಾರು ಶಾಸಕರ ಸಭೆ ಕರೆಯಲು ನಿರ್ಧರಿಸಿದ್ದಾರೆ. ಆದರೆ, ವಿಭಾಗವಾರು ಶಾಸಕರ ಸಭೆ ಯಾಕೆ ಕರೆಯುತ್ತೀರಿ. ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸೋಣ ಅಂತಾ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂಗೆ ಬಹಿರಂಗವಾಗಿ ಹೇಳಿದ್ದಾರೆ. ಈಗ ವಿಪಕ್ಷಗಳು ಬೇರೆ ಸಿಎಂ ವಿರುದ್ಧ ಬುಸುಗುಡುತ್ತಿವೆ. ಹೀಗಾಗಿ ಸಿಎಂ ನಡೆ ಏನು ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.