Tuesday, November 26, 2024

‘ನಾನು ಹೋದ ಮೇಲೂ ಜೆಡಿಎಸ್ ಗಟ್ಟಿಯಾಗಿ ಇರಲಿದೆ’: ಹೆಚ್​.ಡಿ.ದೇವೇಗೌಡ

ಬೆಂಗಳೂರು: ಇಷ್ಟು ದಿನ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಮಾಜಿ ಪ್ರಧಾನಿ ಹೆಚ್ಡಿಡಿ ದಿಢೀರ್‌ ಅಂತ ಸುದ್ದಿಗೋಷ್ಠಿ ನಡೆಸಿದರು. ಪಕ್ಷದ ನಿಲುವು ಹಾಗೂ ಅವಹೇಳನಾಕಾರಿ ಹೇಳಿಕೆಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಕಳೆದ ಮೂರು ನಾಲ್ಕು ತಿಂಗಳಿನಿಂದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ  ಟಾಕ್​ವಾರ್ ನಡೀತಿದೆ. ಅಷ್ಟೇ ಅಲ್ಲದೇ ಜೆಡಿಎಸ್ ಪಕ್ಷಕ್ಕೆ ಉಳಿಗಾಲ ಇಲ್ಲ. ಅದೊಂದು ಬಿಜೆಪಿಯ ಬಿ ಟೀಮ್. ಬಿಜೆಪಿ ವಿಚಾರದಲ್ಲಿ ಜೆಡಿಎಸ್ ಸಾಫ್ಟ್​ ಕಾರ್ನರ್ ಆಗಿದೆ ಅನ್ನೋ ಆರೋಪಗಳು ಕೇಳಿ ಬರುತ್ತಿತ್ತು. ಇದರಿಂದ ದಿಢೀರ್‌ ಅಂತ ಎಂಟ್ರಿ ಕೊಟ್ಟ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ನಾನು ಇರುವಷ್ಟು ದಿನ ಮಾತ್ರ ಅಲ್ಲ. ನಾನು ಹೋದ ಮೇಲೂ ಈ ಪಕ್ಷ ಉಳಿಯಲಿದೆ. ಅದಕ್ಕಾಗಿ ನಾನು ಹೋರಾಟ ಮಾಡುತ್ತೇನೆ. ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ಕರ್ನಾಟಕದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲಾ. ಪಕ್ಷ ಉಳಿಯುತ್ತದೋ ಹೋಗುತ್ತದೋ ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕುಮಾರಸ್ವಾಮಿ, ರೇವಣ್ಣ ಕಾರಣನಾ? ಅನ್ನೋ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ಇನ್ನೂ ಸಭಾಪತಿ ರಾಜೀನಾಮೆ ವಿಚಾರದಲ್ಲಿ ನನ್ನ ಸೆಕ್ಯೂಲರ್ ಪ್ರಶ್ನೇ ಮಾಡಿದ್ದಾರೆ. ಹಾಗಾದರೆ ಇವರು ಮಾಡುತ್ತಿರುವುದು  ಏನು ಎಂದು ಹೆಚ್​ಡಿಡಿ ಪ್ರಶ್ನೇ ಮಾಡಿದ್ದಾರೆ. 130 ಇದ್ದ ಸೀಟು 78 ಯಾಕೆ ಆಯ್ತು.? ಹಾಲು, ಅಕ್ಕಿ ಅಂತ ಭಾಗ್ಯದ ಮೇಲೆ ಭಾಗ್ಯ ಕೊಟ್ರಿ ಆಮೇಲೆ ಏನಾಯ್ತು?ಜೆಡಿಎಸ್ ಜೊತೆ ಹೋಗಿದ್ದಕ್ಕೆ ಅಂತಾ ಹೇಳ್ತೀರಾ?. ನಾವು 28 ಸೀಟ್ ಕಳೆದುಕೊಂಡೆವು, ಅವರು 50 ಸೀಟು ಕಳೆದುಕೊಂಡರು. ಹಾಸನದಲ್ಲಿ ಈಗ ಕಾಂಗ್ರೆಸ್ ಏನಾಗಿದೆ. ಒಂದು ನಗರಸಭೆ ಚುನಾವಣೆ ಕೂಡ ಗೆಲ್ಲೋಕೆ ಆಗಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ಜನವರಿ 7ರಂದು ಮತ್ತೆ ನಿಷ್ಠಾವಂತ ಕಾರ್ಯಕರ್ತರ ಸಭೆಯನ್ನ ಕರೆಯಲ್ಲಿದ್ದು, ಹೆಚ್​.ಡಿ.ಕುಮಾರಸ್ವಾಮಿಗೆ ಸಂಪೂರ್ಣ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ. ಆಗ ಇನ್ನೂ ಯಾವ ಯಾವ ಚರ್ಚೆಗಳು ಆಗ್ತಾವೆ ಅನ್ನೋದು ಈಗ ಸದ್ಯದ ಪ್ರಶ್ನೇಯಾಗಿದೆ.

RELATED ARTICLES

Related Articles

TRENDING ARTICLES