Tuesday, November 26, 2024

‘ಮತದಾರರಿಗೆ ಮಾದರಿಯಾದ ಕೊಪ್ಪಳದ ಅಜ್ಜಿ’

ಕೊಪ್ಪಳ: ಎರಡನೇ ಹಂತದ ಚುನಾವಣೆ ಕೊಪ್ಪಳ ಜಿಲ್ಲೆಯಲ್ಲಿ ಇಂದು‌ ಬೆಳ್ಳಿಗ್ಗೆಯಿಂದ ಜೋರಾಗಿದೆ. ಇನ್ನೂ ಯುವಕರು ಮತಗಟ್ಟೆಗೆ ಬಂದು ವೋಟ್ ಮಾಡೋದು ಕಾಮನ್ ಆದರೆ ಶತಕ ದಾಟಿದ ಅಜ್ಜಿಯೊಬ್ಬರು ವಿಲ್ ಚೇರನಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸುವ ಮೂಲಕ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಹೌದು ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಮೊದಲನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಶೇಕಡಾ 80% ಕ್ಕೂ ಹೆಚ್ಚು ಮತದಾನವಾಗಿದೆ. ಇದೀಗ ಎರಡನೇ ಹಂತದ ಚುನಾವಣೆಯೂ ಅದೇ ದಾರಿಯಲ್ಲಿ ಸಾಗುತ್ತಿದೆ. ಇದಕ್ಕೆ ಸಾಕ್ಷಿ ವಯೋಮಾನದವರ ಜೊತೆಗೆ ವಯೋವೃದ್ಧರು ಮತಗಟ್ಟೆಗೆ ಬಂದು ಉತ್ಸಾಹದಿಂದ ಮತವನ್ನು ಹಾಕುತ್ತಿದ್ದಾರೆ. ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶತಕ ದಾಟಿದ ಅಂದರೆ ಬರೋಬ್ಬರಿ 120 ವರ್ಷ ದಾಟಿದ ವೃದ್ಧೆಯೊಬ್ಬರು ಮತಗಟ್ಟೆಗೆ ಬಂದ ಮತದಾನ ಮಾಡಿದ್ದಾರೆ. ಇದು ಮತದಾನ ನಿರ್ಲಕ್ಷ್ಯ ಮಾಡುವವರಿಗೆ ಹೆಬ್ಬಾಳ ಗ್ರಾಮದ ಅಜ್ಜಿ ಮಾದರಿಯಾಗಿದ್ದರೆ ಅಂತಾನೇ ಹೇಳಬಹುದು. ಇನ್ನೂ ಮತದಾನದ ಕೇಂದ್ರಗಳಲ್ಲಿ ಕೊವಿಡ್-19 ನಿಯಮ‌ ಪಾಲನೆ ಮಾಡುವುದರಿಂದ ಸಾರ್ವಜನಿಕರು ಯಾವುದೇ ಭಯ ಆತಂಕವಿಲ್ಲದೇ ಮತಗಟ್ಟೆಗೆ ಬಂದು ಮತ ಚಲಾಯಿಸುವಂತಾಗಿದೆ ಅಂದರೆ ತಪ್ಪಾಗಲಾರದು.

RELATED ARTICLES

Related Articles

TRENDING ARTICLES