Tuesday, November 26, 2024

‘ಎರಡನೇ ಹಂತದ ಚುನಾವಣೆ ಕಾರ್ಯಕ್ಕೆ ಸಿಬ್ಬಂದಿಗಳ ನಿಯೋಜನೆ’

ಹುಬ್ಬಳ್ಳಿ : ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಡಿ.27 ರಂದು ನಡೆಯಲಿರುವ ಮತದಾನಕ್ಕೆ ಸಿಬ್ಬಂದಿಗಳನ್ನು ನೇಮಿಸುವ ಮಸ್ಟರಿಂಗ್ ಕಾರ್ಯ ನಗರದ ಲ್ಯಾಮಿಂಗಟನ್ ಶಾಲೆಯಲ್ಲಿ ಜರುಗುತ್ತಿದೆ.

ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯಿತಿಯ ಒಟ್ಟು 124 ಮತಕ್ಷೇತ್ರಳಿಂದ 348 ಗ್ರಾಮ ಪಂಚಾಯತಿ ಸದಸ್ಯರ ಆಯ್ಕೆಗೆ ಮತದಾನ ಜರುಗಲಿದೆ. 1036 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ.

159 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 26 ಚುನಾವಣೆ ಅಧಿಕಾರಿ, 26 ಸಹಾಯಕ ಚುನಾವಣೆ ಅಧಿಕಾರಿ, 172 ಮತಗಟ್ಟೆ ಅಧ್ಯಕ್ಷಾಧಿಕಾರಿ, 176 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 352 ಮತಗಟ್ಟೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಒಂದು ಮತಕ್ಷೇತ್ರಕ್ಕೆ ಅವಿರೋಧವಾಗಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಮಲ್ಲಿಗವಾಡ ಗ್ರಾಮದ 2 ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. 30 ಸೂಕ್ಷ್ಮ 17 ಅತಿ ಸೂಕ್ಷ್ಮ ಮತೆಗಟ್ಟೆಗಳನ್ನು ಗುರುತಿಸಲಾಗಿದೆ. 16‌ ಸೆಕ್ಟರ್, 38‌ ರೂಟ್ ಗಳನ್ನು ಗುರುತಿಸಲಾಗಿದ್ದು, ಚುನಾವಣೆ ಸಿಬ್ಬಂದಿ, ಮತಪತ್ರ, ಮತಪೆಟ್ಟೆಗಳನ್ನು ಆಯಾ ಮತಗಟ್ಟೆಗಳಿಗೆ ಕರೆದೊಯ್ಯಲು 25 ಸರ್ಕಾರಿ ಬಸ್, 6 ಶಾಲಾ ಬಸ್ ನಿಯೋಜಿಸಲಾಗಿದೆ. 57821 ಪುರುಷ, 55984 ಮಹಿಳೆ, 1 ಇತರೆ ಒಟ್ಟು 113806 ಮತದಾರರು ಇದ್ದಾರೆ.

ಪೊಲೀಸ್ ಸಿಬ್ಬಂದಿ ನೇಮಕ: ಗ್ರಾ.ಪಂ. ಚುನಾವಣೆ ಮತದಾನಕ್ಕೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ತಾಲೂಕಿಗೆ ಸಂಬಂದ ಪಟ್ಟಂತೆ 300 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಒಬ್ಬ ಡಿ.ವೈ.ಎಸ್.ಪಿ, 4 ಸಿ.ಪಿ.ಐ, 4 ಪಿ.ಎಸ್.ಐ, 20 ಎ.ಎಸ್.ಐ, 150 ಪೊಲೀಸ್ ಕಾನಸ್ಟೇಬಲ್, 65 ಕಾರಾಗೃಹ ಭದ್ರತಾ ಸಿಬ್ಬಂದಿ, 34 ಹೋಮ್ ಗಾರ್ಡ್ ಗಳು ಮತದಾನ ಭದ್ರತೆ ಕಾರ್ಯನಿರ್ವಹಿಸುವರು. 2 ಕೆ.ಎಸ್.ಆರ್, 3 ಡಿ.ಎ.ಆರ್ ತುಕಡಿಗಳನ್ನು ಸನ್ನದ್ಧವಾಗಿರಿಸಲಾಗಿದೆ.

ಆರೋಗ್ಯ ಸಿಬ್ಬಂದಿ ನೇಮಕ: ಕೋವಿಡ್-19 ಹಿನ್ನಲೆಯಲ್ಲಿ ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗೃತೆ. ಕ್ರಮಗಳನ್ನು ಕೈಗೊಳ್ಳಲಾಗಿದೆ. 162 ಆರೋಗ್ಯ ಸಿಬ್ಬಂದಿಗಳನ್ನು ಮತದಾನ ಜರುಗುವ ಬೂತ್ ಗಳಿಗೆ ನೇಮಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ವೈದ್ಯಾಧಿಕಾರಿಗಳನ್ನು ಚುನಾವಣೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸಾಮಾಜಿ ಅಂತರ, ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸೈನಿಟೈಜರ್ ಕಡ್ಡಾಯ ಗೊಳಿಸಲಾಗಿದೆ.

ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ್ ನಾಸಿ, ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ತಾಲೂಕು ವೈದ್ಯಾಧಿಕಾರಿ ಆರ್.ಎಸ್.ಹಿತ್ತಲಮನಿ, ಗ್ರಾಮೀಣ ಸಿ.ಪಿ.ಐ ಆರ್.ಬಿ.ಗೋಕಾಕ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು. ಚುನಾವಣೆ ನೇಮಿಸಲಾದ ಸಿಬ್ಬಂದಿ ಬೆಳಗ್ಗೆ 8 ಗಂಟೆಯಿಂದಲೇ ಕರ್ತವ್ಯಕ್ಕೆ ವರದಿ ಮಾಡಿಕೊಂಡರು

RELATED ARTICLES

Related Articles

TRENDING ARTICLES